ಗೋಕಾಕ:ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ
ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು : ಕಡಬಗಟ್ಟಿಯಲ್ಲಿ ಘಟನೆ
ಗೋಕಾಕ ಅ 26: ಕಿರುಕುಳ ತಾಳಲಾರದೆ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ಸರಹದ್ದಿನಲ್ಲಿ ನಡೆದಿದೆ
ಸಿದ್ದಪ್ಪ ಸಿದ್ದಪ್ಪ ಮೇಳೆದ (26) ಸಾ. ಗುದನಟ್ಟಿ ನೇಣು ಹಾಕಿಕೊಂಡ ಯುವಕ ಎಂದು ಗುರಿತಿಸಲಾಗಿದೆ
ಇವನು ತನ್ನ ಅಣ್ಣನ ಹೆಂಡತಿ ತಿರಿಕೊಂಡಾಗ ಅವಳ ಮಕ್ಕಳ ಉಪ ಜೀವನಕ್ಕಾಗಿ ಬ್ಯಾಂಕಿನಲ್ಲಿ ಹಣ ಇಡಲು ಅಂತಾ ಜಮೀನು ಮಾರಿದ ಹಣವನ್ನು ಸಿದ್ದಪ್ಪ ಮುಕ್ಕನ್ನವರ ಸಾ .ಕಡಬಿ ಇವನಿಗೆ ಖಾತೆಗೆ ಸುರೇಶ ಪೆಂಡಾರಿ ಸಾ. ಕುಟ್ಟರನಟ್ಟಿ ಅವನ ಸಮಕ್ಷಮ ಹಣ ಜಮೆ ಮಾಡಿದ್ದನು ಇವರಿಬ್ಬರು ಸೇರಿ ಹಣವನ್ನು ಮಕ್ಕಳಿಗೆ ನೀಡದೆ ತಾವೇ ಇಟ್ಟುಕೊಂಡು ಬೈದು ಬೆದರಿಕೆ ಹಾಕಿ ಹೊಡಿ ಬಡಿ ಮಾಡಿದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ
ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ