ಗೋಕಾಕ:ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ.ಆರ್.ಕಾಗಲ್
ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ : ಟಿ.ಆರ್.ಕಾಗಲ್
ಗೋಕಾಕ ಜ 12 : ಶೈಕ್ಷಣಿಕ ಚುಟುವಟಿಕೆಗಳಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಕೂಡ ಅತ್ಯಂತ ಮಹತ್ವದಾಗಿದೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಹೇಳಿದರು.
ರವಿವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕೋಡಿ ಪ್ರಧಾನ ಮಂತ್ರಿ ಷೋಷಣಶಕ್ತಿ ನಿರ್ಮಾಣ ಯೋಜನೆ ( ಎಮ್.ಡಿ.ಎಮ್) , ತಾಲೂಕು ಪಂಚಾಯತ್ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರದ ಭಾಗವಹಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ, ಆರೋಗ್ಯಿಕವಾಗಿ ಹಾಗೂ ನೀರಾವರಿ ಕ್ಷೇತ್ರಗಳಿಗೆ ಮಹತ್ವ ನೀಡಿ ಕಾರ್ಯಮಾಡುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಗೋಕಾಕ ತಾಲೂಕನ್ನು ಅಭಿವೃದ್ಧಿ ಪಡೆಸುತ್ತಿದ್ದಾರೆ. ಇದರಿಂದ ಈ ಭಾಗದ ಜನರು ಸ್ವಾವಲಂಬಿಯಾಗಿ ಬದುಕುಬೇಕೆಂದು ಮಹಾನ ಕನಸು ಕಂಡಿದ್ದಾರೆ. ಇದಕ್ಕೆ ನಾವೆಲ್ಲರೂ ಅವರಿಗೆ ಸಹಕಾರ ನೀಡಿ ಗೋಕಾಕ ಶೈಕ್ಷಣಿಕವಾಗಿ ಅತ್ಯಂತ ಉನ್ನತ ಮಟ್ಟಕ್ಕೆ ತರಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಸಬೇಕು ಎಂದು ಹೇಳಿದರು
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಡೆಪ್ಪ ತೋಳಿನವರ, ಎಂ.ಡಿ.ಚುನಮರಿ, ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಬಿಸಿಯೂಟ ಸಹಾಯಕ ನಿರ್ದೇಶಕ ಅಶೋಕ ಮಲ್ಲಬನ್ನವರ, ಮುಖ್ಯ ವೈದ್ಯಾಧಿಕಾರಿ ರವೀಂದ್ರ ಆಂಟಿನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಮತಿ ಎಂ.ವ್ಹಿ.ಭಾಗ್ಯನ್ನವರ, ಶ್ರೀಮತಿ ಪಾರ್ವತಿ ಕೌಜಲಗಿ, ಜಿಲ್ಲಾ ಉಪಾಧ್ಯಕ್ಷ ಜಿ.ಆರ್.ಸನದಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಕೋಡೊಳ್ಳಿ , ಎಸ್.ಎಸ್.ಮಾಳಗಿ, ಸಂಜು ನಾಯಿಕ, ಅಗ್ನಿ ಶಾಮಕದಳದ ಎಸ್.ಎನ್ ಮೆಳವಂಕಿ ಉಪಸ್ಥಿತರಿದ್ದರು.