ಗೋಕಾಕ:ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ
ಸಚಿವೆ ಹೆಬ್ಬಾಳಕರ ಗುಣಮುಖರಾಗಲೆಂದು ಗೋಕಾಕದಲ್ಲಿ ಕೈ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ
ಗೋಕಾಕ ಜ 15 : ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಮರಳಲಿ ಎಂದು ಪ್ರಾರ್ಥಿಸಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬುಧವಾರದಂದು ನಗರದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ ಮಹಾಂತೇಶ ಕಡಾಡಿ,
ಸಾದಿಕ್ ಲಾಡಖಾನ್, ಶಬ್ಬೀರ್ ಮುಜಾವರ, ಸುಭಾಷ್ ಸಣ್ಣತಿಪ್ಪಗೋಳ, ಸಂಜು ಮಾನಗಾಂವಿ, ಸದಾನಂದ ಚೂನನ್ನವರ, ಸಂಗೀತಾ ಕಾಂಬಳೆ, ಸುನೀತಾ ಕೊಣ್ಣೂರ, ಶಾರದಾ ಹೊನಕುಪ್ಪಿ ಉಪಸ್ಥಿತರಿದ್ದರು .