RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ

ಮೂಡಲಗಿ:ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ 

ಜೀವನದಲ್ಲಿ ಯಶಸ್ಸು ಸಾಧಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ : ಎ.ಜಿ.ಮಾವಿನಕುರೆ
ಮೂಡಲಗಿ ಅ 27: ಈಗಿನ ಸ್ಫರ್ದಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶಗಳು ಇವೆ ಅದರಲ್ಲಿಯೂ ಸೌಂಧರ್ಯ ಮತ್ತು ಆರೋಗ್ಯ ಕ್ಷೇತ್ರ ಬೆಳವಣಿಗೆ ಆಗುತ್ತಿದೆ ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಜಿವನ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿಯ ನಭಾರ್ಡ ಡಿ.ಡಿ.ಎಮ್ ಎ.ಜಿ.ಮಾವಿನಕುರೆ ಹೇಳಿದರು.

ಅವರು ಭಾರತ ಪೌಂಡೇಶನ್‍ದ ಯಾದವಾಡ ದಾಲ್ಮೀಯಾ ಸಿಮೆಂಟ ಕಾರ್ಖಾನೆಯ ದಾಲ್ಮೀಯಾ ಕೌಶಲ್ಯ ಅಭಿವೃಧ್ಧಿ ಕಾರ್ಯಕ್ರಮದ ಅಡಿಯಲ್ಲಿ ಧೀಕ್ಷಾ ಕೌಶಲ್ಯ ತರಭೇತಿ ಕೇಂದ್ರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಲ್ಲಿಗೆ ಬೆಳಗಾವಿಯಲ್ಲಿ ಗುರುವಾರ ಜರುಗಿದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುದ್ರಾ ಯೋಜನೆ ಅಡಿ ಬ್ಯಾಂಕಿನಲ್ಲಿ ಸಾಲ ಪಡೆದುಕೋಂಡು ಸ್ವಂತ ಉದ್ದೀಮೆ ಪ್ರಾರಂಭಿಸಿ ಇತರರಿಗೆ ಉದ್ಯೋಗನೀಡಿ ಎಂದು ಶಿಬಿರಾರ್ಥಿಗಳಿಗೆ ಕೀವಿ ಮಾತು ಹೇಳಿದರು.
ಬೆಂಗಳೂರು ನಭಾರ್ಡ ಎ.ಜಿ.ಎಮ್ ಅಪರ್ನಾ ಕೊಟ್ಲೆ ಅವರು ಪ್ರಮಾಣ ಪತ್ರ ವಿತರಿಸಿ ಇಂತಹ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮದ ಮೂಲಕ ತಾವುಗಳು ತರಬೇತಿ ಪಡೆದುಕೋಂಡು ಮುಂದಿನ ಉದ್ಯೋಗ ಜಿವನ ಉತ್ತಮವಾಗಿ ರೂಪಿಸಿಕೊಂಡು ಅನುಭವ ಹಾಗೂ ಕೀರ್ತಿ ನಿಮ್ಮದಾಗಲಿ ಹಾಗೂ ಯಶಸ್ಸು ಗಳಿಸಲು ತಾಳ್ಮೆ ಮತ್ತು ಶ್ರಮ ಅವಶ್ಯಕ ಎಂದು ಹೆಳಿದರು
ಕಾರ್ಯಕ್ರಮ ನೇತೃತ್ವ ವಹಿಸಿದ್ದ ದಾಲ್ಮೀಯಾ ಕೌಶಲ್ಯ ಅಭಿವೃಧ್ಧಿ ಕೇಂದ್ರದ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಸಂಯೋಜಕರು ರವಿ ಬಿಸಗುಪ್ಪಿ ಮಾತನಾಡಿ, ಅತಿ ಕಡಿಮೆ ಮತ್ತು ರಿಯಾಹಿತಿ ದರದಲ್ಲಿ ಉನ್ನತ ಮಟ್ಟದ ತರಬೇತಿಗಳನ್ನು ನಿಡಲಾಗುತ್ತಿದೆ. ದೀಕ್ಷಾ ಕೌಶಲ್ಯಕೇಂದ್ರದಲ್ಲಿ ಆದುನೀಕ ತರಬೇತಿ ಉಪಕರಣಗಳು ಅಮತ್ತು ನುರಿತ ತರಬೇತಿದಾರರು ಹೋಂದಿರುವ ಕೇಂದ್ರವಾಗಿದೆ ಇಲ್ಲಿ ಹೆಚ್ಚು ಪ್ರಾಯೋಗಿತ್ಮಾಕವಾಗಿ ಕಲಿಸಿಗೊಡಲಾಗುತ್ತಿದೆ. ಜೋತೆಗೆ ವ್ಯಕ್ತಿತ್ವ ಬೇಳವನಿಗೆ ಕೌಶಲ್ಯ, ಆಂಗ್ಲ ಭಾಷೆ ಕೌಶಲ್ಯ ಹಾಗೂ ಕಂಪ್ಯೂಟರ ತರಭೆತಿಗಳನ್ನು ನೀಡಿ ಶೇ.100 ವಿವಿದ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ತರಬೇತಿದಾರ ಶ್ರೀಮತಿ ಜ್ಯೋತಿ, ಕೆ.ಎಲ್.ಇ ಪ್ಯಾಷನ ಟೆಕ್ಕನ್ವಾಲಜಿ ಸಿಬ್ಬಂದಿ, ಕೇಂದ್ರದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಮಾರಿ ಸುರಬಿ ನಿರೂಪಿಸಿದರು, ತರಬೆತಿದಾರದ ತೇಜಶ್ವಿ ವಂದಿಸಿದರು.

Related posts: