RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ :ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ

ಮೂಡಲಗಿ :ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ 

ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಶಾಸಕ ಬಾಲಚಂದ್ರರಿಂದ ಅಭಿನಂದನೆ

ಮೂಡಲಗಿ  ಅ 27: ವಿಭಾಗ ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ನಾಗನೂರ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಬಾಲಕರ ತಂಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಾಲೆಗೆ ಭೇಟಿನೀಡಿ ಕ್ರೀಡಾಪಟ್ಟುಗಳನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಜಾರಕಿಹೊಳಿ ಅವರು ಮಹಾಲಿಂಗೇಶ್ವರ ಶಾಲೆ ಮಕ್ಕಳು 14 ಬಾರಿ ರಾಜ್ಯ ಮಟ್ಟಕ್ಕೆ ಹಾಗೂ 9 ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಒಮ್ಮೆ ಬಂಗಾರದ ಪದಕ, 4 ಬಾರಿ ಬೇಳ್ಳಿ ಪದಕ ಹಾಗೂ 4 ಬಾರಿ ಕಂಚಿನ ಪದಕ ಪಡೆದಿದ್ದು, ಸದರಿ ಖೋ ಖೋ ತಂಡಕ್ಕೆ ತರಬೇತಿ ನೀಡಿದ ಈರಣ್ಣ ಹಳಿಗೌಡರ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು. ಬಾಲಕರೊಂದಿಗೆ ಸಂವಾದ ನಡೆಸಿ ಈ ವರ್ಷವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ನಾಗನೂರ ಗ್ರಾಮದ ಹಾಗೂ ಸಮಸ್ಥ ಗುರು ಹಿರಿಯರ ಹೆಸರು ತರಲಿ ಎಂದು ಹಾರೈಸಿದರು.

ಸಂಸ್ಥೆಯ ಅದ್ಯಕ್ಷ ಬಿ.ಆರ್.ಪಾಟೀಲ ಉಪಾಧ್ಯಕ್ಷ ಎಸ್.ಎಲ್.ಹೊಸಮನಿ ಕಾರ್ಯದರ್ಶಿ ಎಸ್.ಬಿ.ಹೊಸಮನಿ, ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯ ಎಸ್.ಬಿ.ಕೇದಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ಬಂಡಿವಡ್ಡರ, ಸಿಬ್ಬಂದಿವರ್ಗ ಉಪಸ್ಥಿತರಿದ್ದರು

Related posts: