ಗೋಕಾಕ:ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲರಿಗೆ ಸನ್ಮಾನ
ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲರಿಗೆ ಸನ್ಮಾನ
ಗೋಕಾಕ ಅ 28: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಇಲ್ಲಿಯ ಟಿಎಪಿಸಿಎಮ್‍ಎಸ್‍ನ ಅಧ್ಯಕ್ಷ ಬಸಗೌಡ ಪಾಟೀಲ(ನಾಗನೂರ) ಅವರನ್ನು ನಗರದ ಎಪಿಎಮ್‍ಸಿಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ಹರಿಹರ)ದ ರಾಜ್ಯ ಉಪಾಧ್ಯಕ್ಷ ಈರಪ್ಪ ಬೆಳಕೂಡ, ಜಿಲ್ಲಾಧ್ಯಕ್ಷ ಎಲ್.ಬಿ.ಹುಳ್ಳೇರ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಗೋಲಭಾಂವಿ, ನಿರ್ದೇಶಕ ಎಮ್,ಎಮ್,ಪಾಟೀಲ ಅವರು ಶುಕ್ರವಾರದಂದು ಸತ್ಕರಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಮ್‍ಎಸ್‍ನ ನಿರ್ದೇಶಕರಾದ ಗುರುನಾಥ ಕಂಕಣವಾಡಿ, ಅಶೋಕ ನಾಯಿಕ, ಬಸಗೌಡ ಪಾಟೀಲ(ಮೆಳವಂಕಿ) ಪ್ರಭಾಕರ ಬಂಗೆನ್ನವರ, ವ್ಯವಸ್ಥಾಪಕ ಎಚ್.ವಾಯ್.ಐನಾಪೂರ ಇದ್ದರು.