ಗೋಕಾಕ:ನಕ್ಷಾ” ಸರ್ವೇ ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ

ನಕ್ಷಾ” ಸರ್ವೇ ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ
ಗೋಕಾಕ ಫೆ 18 : ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ನಗರಸಭೆ ಗೋಕಾಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕೇಂದ್ರ ಸರಕಾರದ ಯೋಜನೆ “ನಕ್ಷಾ” ಸರ್ವೇ ಕಾರ್ಯ ಚಾಲನೆ ಸಮಾರಂಭವನ್ನು ಮಂಗಳವಾರದಂದು ನಗರಸಭೆ ಸಭಾ ಭವನದಲ್ಲಿ ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಬಿಬಿಬತೂಲ ಜಮಾದಾರ, ಪ್ರಾದೇಶಿಕ ಭೂ ದಾಖಲೆಗಳ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ನಜ್ಮಾ ಪೀರಜಾದೆ, ತಹಶೀಲದಾರ ಡಾ.ಮೋಹನ ಭಸ್ಮೆ, ಡಿವೈಎಸ್‍ಪಿ ಡಿ ಎಚ್ ಮುಲ್ಲಾ, ಪೌರಾಯುಕ್ತ ರಮೇಶ ಜಾಧವ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್ ಆರ್ ಪಾಟೀಲ ಇದ್ದರು.
.