RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್

ಗೋಕಾಕ:ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್ 

ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್

ಗೋಕಾಕ ಫೆ 27 : ಗೋಕಾಕ್ ಗ್ರೇಡ್-2 ತಹಶೀಲ್ದಾರ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ಐದು ತಂಡಗಳಾಗಿ 50 ಜನ ಅಧಿಕಾರಿಗಳು ಇಂದು ಬೆಳಗ್ಗೆ ಹಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಗಾಢ ನಿದ್ದೆಯಲ್ಲಿದ್ದ ಅಧಿಕಾರಿಗಳ‌ ಮನೆ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗೋಕಾಕ್ ಗ್ರೇಡ್-2 ತಹಶೀಲ್ದಾರ್ ಶ್ರೀಕಾಂತ ಬೆಟಗೇರಿ, ಕಂದಾಯ ನಿರೀಕ್ಷಕ ಶಿವಾನಂದ ಹಿರೇಮಠ ಸೇರಿ ಹಲವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಮನೆ ಹಾಗೂ ಕಚೇರಿಯಲ್ಲಿರುವ ದಾಖಲೆಗಳ‌ನ್ನು ಪರಿಶೀಲನೆ ನಡೆಸಿದ್ದಾರೆ.
ಅಕ್ರಮವಾಗಿ ಎಸ್. ಎಸ್‌. ವೈ ಪಿಂಚಣಿ ಮಂಜೂರಾತಿ ಆರೋಪ ಕೇಳಿ ಬಂದಿತ್ತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಈ ಹಿಂದೆಯೂ ದಾಳಿ ಮಾಡಲಾಗಿತ್ತು. ಇಂದು ‌ಮತ್ತೊಮ್ಮೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ತಹಶೀಲ್ದಾರ್ ಕಚೇರಿ ಸೇರಿದಂತೆ ಬೇರೆ ಬೇರೆ ‌ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Related posts: