ಗೋಕಾಕ:ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸವಂತೆ ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಗೋಕಾಕ ಅ 29: ರಾಜ್ಯ ಸರಕಾರ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಜಿಲ್ಲಾ ಸಂಘದ ಪದಾಧಿಕಾರಿಗಳು, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳು ರವಿವಾರದಂದು ಸಚಿವರನ್ನು ಅವರ ಕಾರ್ಯಾಲಯದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ರಾಜ್ಯದಲ್ಲಿ 10,450 ಜನ ಗ್ರಾಮ ಸಹಾಯಕರು ಇದ್ದು ಅವರನ್ನು ಡಿ ಗ್ರುಪ್ ನೌಕರರೆಂದು ಘೋಷಿಸಿ ಅವರ ಜೀವನಕ್ಕೆ ಆಧಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಬೇಕೆಂದು ಸಚಿವರನ್ನು ಕೋರಿದರು.
ಮುಂಬರುವ ನವ್ಹಂಬರ 6ನೇ ತಾರೀಖಿನ ಒಳಗಾಗಿ ರಾಜ್ಯ ಸರಕಾರ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರೆಂದು ಘೋಷಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟ ಮುಷ್ಕರ ಪ್ರಾರಂಭಿಸಲಾಗುವದೆಂದೂ ಮನವಿಯಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಗ್ರಾಮ ಸಹಾಯಕರ ಸಂಘದ ರಾಜ್ಯ ಉಪಾಧ್ಯಕ್ಷ ಶೌಕತ ಸವಣೂರ, ಜಿಲ್ಲಾ ಗೌರವಾಧ್ಯಕ್ಷ ಮಡಿವಾಳಪ್ಪ ವಣ್ಣೂರ, ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ, ಉಪಾಧ್ಯಕ್ಷ ವೆಂಕಟೇಶ ಕೆಳಗೇರಿ, ಭೀಮಶಿ ಸೋರಗಾಂವಿ, ಪರಸಪ್ಪ ತಳವಾರ ಸೇರಿದಂತೆ ಅನೇಕರು ಇದ್ದರು.