ಗೋಕಾಕ:ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ

ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ
ಗೋಕಾಕ ಮಾ 4 : ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿ ಇವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘವು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ” ಶೈಕ್ಷಣಿಕ ಅಧಿವೇಶನದ” ಕಾರ್ಯಕ್ರಮದಲ್ಲಿ ಅವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯ ಮಟ್ಟದ “ಸಾವಿತ್ರೆಬಾಯಿ ಪುಲೆ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ, ಗೋಕಾಕ ವಲಯ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜಿಲ್ಲಾಧ್ಯಕ್ಷ ಎಸ್.ಎಂ ಲೋಕನ್ನವರ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.