RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ

ಘಟಪ್ರಭಾ:ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ 

ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಂತರಾಗಲು ಸಾದ್ಯ: ಚಕ್ರವರ್ತಿ ಸೂಲಿಬೇಲೆ

ಘಟಪ್ರಭಾ ಅ 30 : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ದೇಶದ ಜನತೆ ಆರೋಗ್ಯವಾಗಿರುತ್ತಾರೆಂದು ಯುವ ಬ್ರಿಗೇಡ ಮುಖ್ಯಸ್ಥರಾದ ಚಕ್ರವರ್ತಿ ಸೂಲಿಬೇಲಿ ಹೇಳಿದರು.

ಅವರು ಮಲ್ಲಾಪೂರ ಪಿ.ಜಿ ಪಟ್ಟಣದ ಜಿಡ್ಡಿಮನಿ ಕಾಂಪ್ಲೇಕ್ಸ್‍ದಲ್ಲಿ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಉದ್ಘಾಟನೆಗೊಂಡ ಜೆ.ಜಿ. ಜೆನರಿಕ್ ಔಷದಿ ಅಂಗಡಿಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಈಗಿನ ಕಾಲದಲ್ಲಿ ಡಾಕ್ಟರ ಶುಲ್ಕಗಿಂತ ಔಷಧಿಯ ಖರ್ಚು ಹೆಚ್ಚಾಗುತ್ತಿರುವದರಿಂದ ಇತರ ಔಷಧಿ ಅಂಗಡಿಗಳಿಗಿಂತ 30 ರಿಂದ 70ಕ್ಕೂ ಕಡಿಮೆ ಖರ್ಚಿನಲ್ಲಿ ಜೆನರಿಕ್ ಔಷಧಿ ಅಂಗಡಿಯಲ್ಲಿ ಸಿಗುತ್ತದೆ. ಇದರಿಂದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಸಾನಿದ್ಯ ವಹಿಸಿದ್ದ ಕೈವಲ್ಯಾನಂದ ಶ್ರೀಗಳು ಆಶಿರ್ವಚನ ನೀಡುತ್ತ ಯುವಕರು ದುಶ್ಟಟಗಳಿಂದ ದೂರವಿರಬೇಕು. ಹಣ ಗಳಕೆಯಲ್ಲಿಯೂ ಸೇವಾ ಮನೋಬಾವನೆ ಇಟ್ಟುಕೊಂಡು ಹಣ ಗಳಿಕೆ ಮಾಡಬೇಕು ಎಂದರು. ಈ ನಿಟ್ಟಿನಲ್ಲಿ ಸಂಜಯ ತೇರಣಿಯವರು ಜೆನರಿಕ್ ಔಷಧಿ ಅಂಗಡಿ ತೆರೆಯುವ ನಿರ್ದಾರ ನಮಗೆ ಸಂತೋಷವನುಂಟು ಮಾಡಿದೆ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ಘೋಡಗೇರಿ ಮಠದ ಶ್ರಿಗಳಾದ ಮಲ್ಲಯ್ಯಾ ಸ್ವಾಮೀಜಿ, ಕರ್ನಾಟಕ ಆರೋಗ್ಯ ಧಾಮದ ಸಿಎಮ್‍ಓ ಡಾ| ಘನಶ್ಯಾಮ ವೈದ್ಯ, ಜೆ ಜಿ ಕೋ ಆಸ್ಪತ್ರೆಯ ಡಿ ಪಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಕಂಗ್ರಾಳಕರ ಇದ್ದರು.

Related posts: