ಗೋಕಾಕ:ನಗರಸಭೆ ಆಯವ್ಯಯ ಮಂಡನೆ

ನಗರಸಭೆ ಆಯವ್ಯಯ ಮಂಡನೆ
ಗೋಕಾಕ ಮಾ 13 : ನಗರಸಭೆಯ 2024-25ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2025-26 ನೇ ಸಾಲಿನ ರೂ.4.95 ಲಕ್ಷಗಳ ಉಳಿತಾಯದ ಆಯ-ವ್ಯಯವನ್ನು ಪೌರಾಯುಕ್ತ ಆರ್.ಪಿ.ಜಾಧವ ಮಂಡಿಸಿದರು.
15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದಿಂದ ಬಿಡುಗಡೆಯಾಗಬಹುದಾದ ಅನುದಾನದಲ್ಲಿ ಅಂದಾಜು ರೂ.4.30 ಕೋಟಿಗಳಲ್ಲಿ ಹೊಸ ರಸ್ತೆ, ಚರಂಡಿ, ಉದ್ಯಾನವನ ಹಾಗೂ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು. ಒಟ್ಟಾರೆ ರೂ.67.42 ಕೋಟಿಗಳ ಆಯ ಮತ್ತು ರೂ.67.37 ಕೋಟಿಗಳ ವ್ಯಯವುಳ್ಳ ಅಂದಾಜು ಆಯವ್ಯಯವನ್ನು ವಿಷ್ಲೇಶನೆ ಮಾಡುತ್ತಾ ಈಗಾಗಲೇ ನಗರದಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯ ಬಿಡುಗಡೆಯಾಗ ಬಹುದಾದ ಅನುದಾನದಲ್ಲಿ ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಅವಕಾಶ ಕಲ್ಪಿಸಲು ರೂ.30 ಕೋಟಿ ನಿರೀಕ್ಷಿಸಲಾಗಿದ್ದು, ರೂ.2.50 ಕೋಟಿ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿ ವಾಣಿಜ್ಯ ಮಳಿಗೆಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಎಸ್.ಎಫ್.ಸಿ. ಹಾಗೂ ಎಂ.ಎಫ್. ನಿಧಿಯ ಶೇ.24.10, 7.25 ಮತ್ತು 5ರ ವಿಭಾಗಗಳಲ್ಲಿ ಅಂದಾಜು ರೂ.51 ಲಕ್ಷ ಅಂದಾಜು ಖರ್ಚುಗಳನ್ನು ಸಭೆಯಲ್ಲಿ ಓದಿ ವಿವರಿಸಿದರು. ಸಭೆಯಲ್ಲಿ ನಗರಸಭೆಯ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ವೆಚ್ಚಗಳ ನಿಯಂತ್ರಣಕ್ಕಾಗಿ ಮಾನ್ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚೇರಮನ್ನರು ಇವರು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪಿ.ವ್ಹಿ.ಮುರಾರಿ. ಉಪಾಧ್ಯಕ್ಷೆ ಶ್ರೀಮತಿ ಬಿ.ಎ.ಜಮಾದಾರ, ಸ್ಥಾಯಿ ಸಮೀತಿ ಚೇರಮನ್ನ ಶ್ರೀಶೈಲ ಯಕ್ಕುಂಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವ್ಹಿ.ವಾಯ್.ಪಾಟೀಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಹೆಚ್.ಗಜಾಕೋಶ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.