ರಾಯಬಾಗ:ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ
ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ : ಇಬ್ಬರ ಬಂಧನ
ರಾಯಬಾಗ 31: ನಕಲಿ ಗುಟ್ಕಾ ತಯಾರಿಕಾ ಘಟಕದ ಮೇಲೆ ಡಿಸಿಐಬಿ ಪೊಲೀಸರು ದಾಳಿ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ
ಖಚಿತ ಮಾಹಿತಿಯೊಂದಿಗೆ ಡಿಸಿಐಬಿ ಇನ್ಸ್‌ಪೆಕ್ಟರ್ ದೊಡ್ಡಮನಿ ನೇತೃತ್ವದಲ್ಲಿ ನಡೆಸಿ 11 ಲಕ್ಷ ರೂ. ಮೌಲ್ಯದ ಗುಟ್ಕಾ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಇಬ್ಬರನ್ನು ಬಂಧಿಸಿದ್ದಾರೆ.
ಕುಡಚಿಯ ಅಲ್ತಾಪ್ ಚಮನ್ ಶೇಖ್, ಮಾಮುದಿನ್ ಚಮನಶೇಖ್ ಬಂಧಿತರು. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.