RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ

ಗೋಕಾಕ:ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ 

ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ :ಪ್ರೊ, ಎಸ್. ಡಿ.ವಾಲಿಕಾರ

ಗೋಕಾಕ ನ 1: ಹಲ್ಮೀಡಿ ಶಾಸನದ ಖಚಿತವಾದ ದಾಖಲೆಯಿಂದಾಗಿ ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ ಎಂದು ಉಪನ್ಯಾಸಕ ಪ್ರೊ, ಎಸ್. ಡಿ.ವಾಲಿಕಾರ ಹೇಳಿದರು.
ಬುಧವಾರದಂದು ನಗರದ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ “ಕರ್ನಾಟಕ ರಾಜ್ಯೋತ್ಸವ” ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀವಿಜಯನ ಕವಿರಾಜಮಾರ್ಗ ಕೃತಿಯಲ್ಲಿ ಕನ್ನಡ ನಾಡಿನ ಜನರ ಸ್ವಾಭಿಮಾನದ ಗುಣಗಾನವಿದೆ, ಕನ್ನಡಿಗರ ಶೌರ್ಯ ಪರಾಕ್ರಮದ ಮತ್ತು ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ,ಟಿ.ಬಿ.ತಳವಾರ ಅವರು ಮಾತನಾಡಿ ಅಧ್ಯಯನದ ಪ್ರಕಾರ ಕನ್ನಡ ಭಾಷೆ ಅಳಿದು ಹೋಗುವ ಸಂಭವವಿದೆ ಈಗಾಗಲೇ ನಾವು ಕನ್ನಡದ ನೆಲ ಜಲವನ್ನು ಸ್ವಲ್ಪ ಪ್ರಮಾಣದಲ್ಲಿ ಕಳೆದುಕೊಂಡಿದ್ದೇವೆ ಇನ್ನು ಮುಂದೆ ಭಾಷೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ ಕನ್ನಡಿಗರಾದ ನಾವು ಕನ್ನಡ ತಾಯಿಗೆ ಗೌರವಕೊಟ್ಟು ಕನ್ನಡವನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಆಡಳಿತಾಧಿಕಾರಿ ಪ್ರೊ,ಆರ್.ಎಸ್.ಡುಮ್ಮಗೋಳರವರು ಪೂಜೆಯನ್ನು ನೇರವೆರಿಸುವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು.
ಉಪನ್ಯಾಸಕರಾದ ಪ್ರೊ,ವ್ಹಿ.ಎಸ್.ರೆಡ್ಡಿ ಸ್ವಾಗತಿಸಿದರು, ರೂಪಾ ಪಾಟೀಲ ವಂದಿಸಿದರು.

Related posts: