ನೇಗಿನಹಾಳ:ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ
ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದಲೇ : ರೋಹಿಣಿ ಪಾಟೀಲ
ನೇಗಿನಹಾಳ ನ 1: ನಮ್ಮ ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕ್ರತಿಯ ಬಗ್ಗೆ ಅಭಿಮಾನವಷ್ಟೇ ಅಲ್ಲದೇ ಭಕ್ತಿಯಿಂದ ಆಚರಣೆಗೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ನೇಗಿನಹಾಳ ಗ್ರಾಮದ ಶೂರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಯಮನೂರೇಶ್ವರ ಯುವಕ ಮಂಡಳದಿಂದ ಹಾಗೂ ವಿವಿಧ ಕನ್ನಡಾಭಿಮಾನಿಗಳಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ತ್ರೀಕುಲಕ್ಕೆ ಸಮಾನತೆ ದೊರತಿದ್ದೆ ಕನ್ನಡಿಗರಿಂದ ಆದರಿಂದಲೇ ಅಕ್ಕಮಹಾದೇವಿ, ಅಕ್ಕನಾಗಮ್ಮ, ಗುಡ್ಡಾಪುರ ದಾನಮ್ಮ, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಹೇಮರೆಡ್ಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಹೀಗೆ ನೂರಾರು ಮಹಿಳೆಯರು ಸಮಾನತೆಯ ಸಂಕೇತವಾಗಿ ಹೋರಹೊಮ್ಮಿದ್ದು ಈ ಕನ್ನಡ ನೆಲದಿಂದಲೇ ಎಂಬುವುದನ್ನು ಎಂದಿಗೂ ಮರೆಯಬಾರದು ಎಂದರು. ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ಬಸವ ಸಿದ್ದಲಿಂಗ ಸ್ವಾಮೀಜಿ ಸಾನಿದ್ಯವಹಿಸಿದ್ದರು.
ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಅದ್ಯಕ್ಷೆ ಸುವರ್ಣಾ ಕಾರಿಮನಿ, ಉಪಾದ್ಯಕ್ಷ ಮಹಾದೇವಪ್ಪ ನರಸಣ್ಣವರ, ಭೀಮಪ್ಪ ಭೂತಾಳಿ, ಮಹಾಂತೇಶ ತಿಗಡಿ, ಕರೆಪ್ಪ ಬೂತಾಳಿ, ದೇವೆಂದ್ರ ಢವಳಿ, ಬಸವರಾಜ ಕುಂಕೂರ, ಉದಯ ಖನಗಾಂವಿ ರತ್ನವ್ವ ಅಕ್ಕನ್ನವರ, ಕಲ್ಲವ್ವ ಹತ್ತಿ, ರತ್ನವ್ವ ಗಂಟಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗ್ರಾಮದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮಲೇಶ ಭೂತಾಳಿ ಸ್ವಾಗತಿಸಿದರು, ಶಿಕ್ಷಕ ರಾಮಣ್ಣ ತೋರಣಗಟ್ಟಿ ನಿರೂಪಿಸಿ ವಂದಿಸಿದರು.