ಗೋಕಾಕ:ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ

ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು : ಪರುಶುರಾಮ ಗಸ್ತೆ
ಗೋಕಾಕ ಏ 5 : ಬಾಬು ಜಗಜೀವನರಾವ್ ಅವರು ಒಬ್ಬ ವ್ಯಕ್ತಿಯಲ್ಲ ದೊಡ್ಡ ಜನಶಕ್ತಿಯಾಗಿದ್ದರು ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರುಶುರಾಮ ಗಸ್ತೆ ಹೇಳಿದರು
ಶನಿವಾರದಂದು ನಗರದ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್ ನಗರಸಭೆ ಇವುಗಳನ್ನು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನರಾವ್ ರವರ 118ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಬಾಬು ಜಗಜೀವನರಾವ್ ಅವರು ಕಾಯಕ ಶರಣರ ತತ್ವಗಳನ್ನು ಪಾಲಿಸಿ ಜೀವನ ನಡೆಸಿದವರು ಎಂದು ಸ್ವಾರ್ಥಕ್ಕಾಗಿ ಇವರು ದುಡಿಯದೆ ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿದವರು. ಈ ದಿನವನ್ನು ಸಮಾನತೆ ದಿನ ಎಂದು ಆಚರಿಸುತ್ತೇವೆ. ಇಂದು ನಾವು ಸಹ ರಾಷ್ಟ್ರ ನಾಯಕರ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನ ಗೊಳಿಸಬೇಕು ಎಂದ ಅವರು ಜಗಜೀವನರಾವ್ ಅವರು ಕೃಷಿ ಸಚಿವರಾಗಿ, ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ, ಉಪ ಪ್ರಧಾನಿಯಾಗಿ ಕಷ್ಟ ಕಾಲದಲ್ಲಿ ತಮ್ಮ ರಾಜಕೀಯ ಜೀವನವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಮಹಾನ ನಾಯಕ , ಕೃಷಿ ಸಚಿವರಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಿದ್ದಿ ಸಂದರ್ಭದಲ್ಲಿ ಅದನ್ನು ಸಹ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಹಸಿರು ಕ್ರಾಂತಿಯ ಹರಿಕಾರರಾಗಿ ಹೊರಹೊಮ್ಮಿದರು ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸರ್ವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸದಾ ಪ್ರಯತ್ನ ಶೀಲರಾಗಿ ಮುನ್ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಡಾ.ಸಿ.ಕೆ.ನಾವಲಗಿ, ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಮುಖಂಡರುಗಳಾದ ಗೋವಿಂದ ಕಳ್ಳಿಮನಿ, ವೀರಭದ್ರ ಮೈಲನ್ನವರ, ಅಜಿತ್ ಹರಿಜನ್, ರಾಮಪ್ಪ ಮರೆಪ್ಪಗೋಳ, ಸುಧೀರ್ ಜೊಡಟ್ಟಿ, ಅಧಿಕಾರಿಗಳಾದ ಎ.ಬಿ.ಮಲ್ಲಬನ್ನವರ, ಬಿ.ಎ.ಮಾಲದಿನ್ನಿ, ಎಂ.ಎಂ.ನಧಾಫ್, ಎಲ್ ಕೆ.ತೋರನಗಟ್ಟಿ, ಜಯಶೆ ತಾಂಬೂಳೆ, ಡಿ.ಎಸ್. ಕೂಡವಕ್ಕಲಿಗ ಡಾ.ಮೋಹನ ಕಮತ್, ಡಾ.ಎಂ.ಎಸ್.ಕೊಪ್ಪದ ಉಪಸ್ಥಿತರಿದ್ದರು.