ಗೋಕಾಕ:ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ
ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ : ಕರವೇ ಅಧ್ಯಕ್ಷ ಬಸವರಾಜ
ಗೋಕಾಕ ನ 1: ಹಿರಿಯ ಸಾಹಿತಿ ಬಾಳೇಶ ಲಕ್ಷಟ್ಟಿ ಗೋಕಾಕ ನಾಡು ಕಂಡ ಮೇರು ಸಾಹಿತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ಬುಧವಾರದಂದು ಸ್ಥಳೀಯ ಕ.ರ.ವೇ ಕಾರ್ಯಾಲಯದಲ್ಲಿ ಏರ್ಪಡಿಸಿದ ಶೃದ್ಧಾಂಜಲಿ ಸಭೆಯಲ್ಲಿ ಬಾಳೇಶ ಲಕ್ಷಟ್ಟಿ ಅವರಿಗೆ ಶೃಂದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಬಾಳೇಶ ಲಕ್ಷಟ್ಟಿ ಅವರು ಗೋಕಾಕ ನಾಡು ಕಂಡ ಅಪರೂಪದ ಸಾಹಿತಿಯಾಗಿದ್ದರು ಕಥೆ , ನಾಟಕ ವ್ಯಕ್ತಿಚಿತ್ರ , ಕವನ ಸಂಕಲನ , ಸಾಂಸ್ಕೃತಿಕ ಮತ್ತು ಸಾಹಿತ್ಯಕ್ಕೆ ಸಂಬಂಧ ಪಟ್ಟಂತ ಸುಮಾರು 70 ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸ್ವಾರಸ್ಯ ಲೋಕಕ್ಕೆ ನೀಡಿದ ಕೀರ್ತಿ ಅವರದ್ದು ಅವರ ಬರವಣಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳು ದೋರಕಿರುವುದು ಗೋಕಾಕ ನಾಡಿನ ಹೆಮ್ಮೆ ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ
ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಿ ಎಂದು ಖಾನಪ್ಪನವರ ಹೇಳಿದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾದಿಕ ಹಲ್ಯಾಳ , ಕರವೇಯ ನಾರಾಯಣ ವಾಗೂಲೇ , ಭೀಮಾಶಂಕರ ಪುಟಾಣಿ , ಆನಂದ ಖಾನಪ್ಪನವರ , ಬಸು ಸುಣಗಾರ ,ಶಂಕರ ಶೇಖರಗೋಳ , ಮಲ್ಲು ಗುಂಡಕಲ್ಲಿ , ಶಂಕರ ಪಡೆಪ್ಪಗೋಳ , ಬಸವರಾಜ ತಿಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು