RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ 

ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ ನ 2: ಜೀವ ಉಳಿಸುವ ಮಹತ್ತರ ಕಾರ್ಯವನ್ನು ಮಾಡುವುದರೊಂದಿಗೆ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದ ದಾನವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ಗುರುವಾರದಂದು ಇಲ್ಲಿಯ ಶ್ರೀ ಚನ್ನಬಸವೇಶ್ವರ ವಿದ್ಯಾ ಪೀಠದಲ್ಲಿ ವಿಶ್ವ ಹಿಂದು ಪರಿಷತ್-ಬಜರಂಗದಳ ಗೋಕಾಕ ಘಟಕ ಹಾಗೂ ರೋಟರಿ ರಕ್ತ ಭಂಡಾರದ ಸಂಯುಕ್ತಾಶ್ರಯದಲ್ಲಿ ಅಯೋಧ್ಯಾ ಬಲಿದಾನ ದಿವಸದ ಅಂಗವಾಗಿ ಬೃಹತ್ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಇಂದಿನ ವೈಜ್ಞಾನಿಕತೆ ಏಷ್ಟೆ ಬೆಳೆದರೂ ರಕ್ತವನ್ನು ತಯ್ಯಾರಿಸಲು ಸಾಧ್ಯವಿಲ್ಲ, ರಕ್ತವನ್ನು ದಾನಿಗಳಿಂದಲೇ ಪಡೆಯಬೇಕು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಬಜರಂಗದಳದ ಯುವಕರು ತಮ್ಮನ್ನು ತೋಡಗಿಸಿಕೊಂಡು ದಾಖಲೆಯ ಪ್ರಮಾಣದಲ್ಲಿ ರಕ್ತದಾನ ಮಾಡುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಇಂದಿನ ಯುವಶಕ್ತಿ ಸಮಾಜಮುಖಿ ಕಾರ್ಯ ಮಾಡುವುದರೊಂದಿಗೆ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಬೇಕು ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್ತಿನ ವಿಭಾಗಿಯ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಮಾತನಾಡಿ, ದೇಶ ಬಲಿಷ್ಠ ಯುವಶಕ್ತಿಯನ್ನು ಹೊಂದಿದೆ. ಈ ಶಕ್ತಿಯ ಸದುಪಯೋಗವಾಗಬೇಕು. ಜಾತಿ,ಮತ, ಪಂಥಗಳ ಭೇದವಿಲ್ಲದೇ ಅಯೋಧ್ಯಾ ಬಲಿದಾನ ದಿನ ಅಂಗವಾಗಿ ದೇಶದ್ಯಾಂತ ಬಜರಂಗದಳದ ಲಕ್ಷಾಂತರ ಕಾರ್ಯಕರ್ತರು ಇಂದು ರಕ್ತದಾನ ಮಾಡುತ್ತಿದ್ದಾರೆ. ಈ ಯುವಶಕ್ತಿ ಸಮಾಜಮುಖಿಯ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಈ ರಕ್ತದಾನ ಶಿಬಿರದಲ್ಲಿ 224 ಜನ ರಕ್ತದಾನ ಮಾಡಿದರು

ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಸದಾಶಿವ ಗುದಗಗೋಳ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ದಿಲೀಪ ಮೆಳವಂಕಿ, ಸದಸ್ಯರಾದ ವಿನೋದ ಸುಪಲಿ, ಬಾಬು ಶೆಟ್ಟಿ, ಎಚ್‍ಡಿಎಫ್‍ಸಿ ಬ್ಯಾಂಕಿನ ವಿಜಯಾನಂದ ಮಟ್ಟಿಕಲಿ, ನ್ಯಾಯವಾದಿಗಳಾದ ಶಂಕರ ಧರೆನ್ನವರ, ಪ್ರವೀಣ ಚುನಮರಿ, ವಿಕಾಸ ನಾಯಿಕ, ಕಿರಣ ಮಿರಜಕರ, ಲಕ್ಷ್ಮಣ ಮಿಶಾಳೆ, ಸುನೀಲ ಧುಮಾಳ, ಸಂತೋಷ ಗೊಂಧಳಿ, ಸತೀಶ ಓಸ್ವಾಲ, ಗುರು ಬೆನ್ನವಾಡ, ಆನಂದ ಕುಡಚಿ, ಪ್ರವೀಣ ಚಕ್ಕಡಿ, ಎಸ್.ನಾಯಿಕ ಸೇರಿದಂತೆ ಅನೇಕರು ಇದ್ದರು.

Related posts: