ಗೋಕಾಕ:ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ
ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು : ತಾಶೀಲ್ದಾರ
ಗೋಕಾಕ ನ 2: ಸುರಕ್ಷಿತ ಪ್ರಯಾಣ ಮಾಡುವುದರ ಮೂಲಕ ಅಪಘಾತವನ್ನು ತಪ್ಪಿಸಬಹುದು ಎಂದು ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ನಾಗರಾಜ ತಾಶೀಲ್ದಾರ ಹೇಳಿದರು.
ಅವರು ಗುರುವಾರದಂದು ನಗರದ ಕುಂಬಾರ ಓಣಿಯಲ್ಲಿ ಜರುಗಿದ ಗೋಕಾಕ ತಾಲೂಕಾ ಮಿನಿ ಗೂಡ್ಸ ಮಾಲಕರ ಮತ್ತು ಚಾಲಕರ ಸಂಘದ ತೃತೀಯ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಷ್ಕಾಳಜಿಯಿಂದ ವಾಹನ ಚಲಿಸಬಾರದು. ಏಕಾಗ್ರತೆ ಮನಷ್ಯನಿಗೆ ಅಗತ್ಯವಾಗಿದೆ ಚಾಲಕರು ತಮ್ಮ ವೃತ್ತಿ ಬಗ್ಗೆ ಶೃದ್ದೆ, ಭಯ, ಭಕ್ತಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ವಾಹನ ಚಾಲನೆಯ ನಿಯಮಗಳನ್ನು ಅನುಸರಿಸಬೇಕು. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕ ಭದ್ರತೆ ಒದಗಿಸುವ ದೃಷ್ಠಿಯಿಂದ ಕಾರ್ಮಿಕ ಇಲಾಖೆಯಿಂದ ಅಪಘಾತ ಹಾಗೂ ಇನ್ನಿತರ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರಸಭೆ ಸದಸ್ಯ ಸುರೇಶ ಬಡೆಪ್ಪಗೊಳ, ಮುರಗೇಶ ಹುಕ್ಕೇರಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಚೇರಮನ್ ರಾಮಸಿದ್ದ ಖಾನಪ್ಪನ್ನವರ, ಹಿರಿಯರಾದ ಮಡಿವಾಳಪ್ಪ ಕುಂಬಾರ, ಬಸಪ್ಪ ರಂಕನಕೊಪ್ಪ, ಚನ್ನಬಸಪ್ಪ ಗಡಾದ, ಮಹಾದೇವ ಕಂಬಾರ, ಮುತ್ತೇಪ್ಪ ಕುಂಬಾರ, ಪದಾಧಿಕಾರಿಗಳಾದ ಮಹಾಂತೇಶ ಕುಂಬಾರ, ಮಲ್ಲಪ್ಪ ಅಂಬಿ, ಅಶೋಕ ಬಂಡಿ, ವಜ್ರಕಾಂತ ಜೋತಾವರ, ಸಯ್ಯದ ಮುಲ್ಲಾ ಮಂಜುನಾಥ ಚೂನ್ನನವರ, ಸತೀಶ ಗಣಾಚಾರಿ, ದುಂಡಪ್ಪ ಕುಂಬಾರ, ಶಫೀಕ ಬಸ್ಸಾಪೂರೆ ಸೇರಿದಂತೆ ಹಲವರು ಇದ್ದರು.