ಘಟಪ್ರಭಾ:ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ
ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ
ಘಟಪ್ರಭಾ ನ 4 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಸಹ ಕೇಂದ್ರ ಸರಕಾರ ಕನ್ನಡ ಭಾಷೆಗೆ ನೀಡಿಬೇಕಾದ ಸಹಾಯ , ಸವಲತ್ತುಗಳನ್ನು ನೀಡದೆ ಮಲತಾಯಿ ದೋರಣೆ ತೊರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ಶುಕ್ರವಾರದಂದು ಧೂಪದಾಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಸಹ ಕೇಂದ್ರ ಸರಕಾರ ಕನ್ನಡ ಭಾಷೆಗೆ ನೀಡಿಬೇಕಾದ ಸವಲತ್ತುಗಳನ್ನು ನೀಡದೆ ಮಲತಾಯಿ ದೋರಣೆ ತೊರುತ್ತಿದೆ ಅದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆ ನಡೆಸಬೇಕಾಗಿದೆ
ಈ ಕುರಿತು ಜಾಗೃತಿ ಮೂಡಿಸಿ ಕನ್ನಡ ಭಾಷೆಯ ಶೆಯೋಭಿವೃದ್ದಿಗಾಗಿ ಫನತೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಅಭಿಮಾನ ಶೂನ್ಯ ವಾಗುತ್ತಿರುವ ಯುವಕರಲ್ಲಿ ಕನ್ನಡದ ಬಗ್ಗೆ ಅರಿವು ಮುಡಿಸಿಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಅದಕ್ಕಾಗಿ ಸಂಘಟನೆಯನ್ನು ಸಕ್ರೀಯ ಗೊಳಿಸಬೇಕಾಗಿದೆ ಕನ್ನಡ ನಾಡು ,ನುಡಿ ,ನೆಲ,ಜಲ , ಭಾಷೆಯ ಜೊತೆಗೆ ಸಡೃಡ ಸಮಾಜವನ್ನು ನಿರ್ಮಿಸಲು ಯುವಕರು ಮುಂದಾಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಸಭೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಉಪಾಧ್ಯಕ್ಷ ದಿಪಕ ಹಂಜಿ , ಸಂಚಾಲಕರಾದ ರಹೇಮಾನ ಮೋಕಾಶಿ , ಶೆಟ್ಟೆಪಾ ಗಾಡಿವಡ್ಡರ , ಬಸು ಗಾಡಿವಡ್ಡರ , ರಮೇಶ ಕಮತಿ , ಮಲ್ಲು ಸಂಪಗಾರ , ಅಶೋಕ ಬಂಡಿವಡ್ಠರ , ಅಜೀತ ಮಲ್ಲಾಪುರ , ವಸಂತ ತೆಳಗೇರಿ , ಮುಗುಟ ಪೈಲವಾನ , ಕೃಷ್ಣಾ ಖಾನಪ್ಪನವರ , ಸುರೇಶ ಬಂಡಿವಡ್ಠರ , ರಾಮ ಕೊಂಗನೋಳಿ , ರಾಮ ಕುಡ್ಡೆಮ್ಮಿ , ಸಂತೋಷ ಗಾಡಿವಡ್ಡರ , ರವಿ ನಾವಿ , ಲಾಜಿಂ ಮೋಕಾಶಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು
ನಂತರ ಪಾಮಲದಿನ್ನಿ , ಬಡಿಗವಾಡ , ಪಾಮಲದಿನ್ನಿ ಕ್ರಾಸ್ , ದಂಡಾಪೂರ , ದುರಡುಂಡಿ , ಅರಬಾಂವಿ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಲಾಯಿತು