ಖಾನಾಪುರ:ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ
ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು: ಅಂಜಲಿ ನಿಂಬಾಳ್ಕರ
ಖಾನಾಪುರ ನ 7: ಹೇ ಮಾನವ ಕುಲ-ಕುಲವೆಂದು ಹೊಡೆದಾಡದಿರಿ, ಎಂಬ ಕನಕದಾಸರ ದಾಸ ಪದವನ್ನು ನೆನೆಯುತ್ತಾ ಭೂಮಿಯ ಮೇಲೆ ಬದುಕುತ್ತಿರುವ ನಾವೆಲ್ಲರೂ ಒಂದೇ, ಒಂದಾಗಿ ಬಾಳಿದರೆ ಸ್ವರ್ಗವನ್ನು ಕಾಣಬಹುದು ಎಂದು ಬಾಲಭವನ ಅದ್ಯಕ್ಷೆ ಅಂಜಲತಾಯಿ ನಿಂಬಾಳ್ಕರ ಹೇಳಿದರು.
ತಾಲೂಕಿನ ಇಟಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕನಕದಾಸರ ಜಯಂತಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದಾಸರಲ್ಲಿ ಶ್ರೇಷ್ಟ ದಾಸರೆಂದು ಅನಿಸಿಕೊಂಡವರೆ ಕನಕಸದಾಸರು. ಇವತ್ತಿನ ದಿನ ನಾವೆಲ್ಲರು ಕೂಡಿಕೊಂಡು ಅವರು ಹಾಕಿದಂತ ಮಾರ್ಗದಲ್ಲಿ ಮುನ್ನೆಡೆದರೆ ಮಾನವ ಜನ್ಮಕ್ಕೆ ಒಳಿತಾಗುವದು ಎಂದು ಮಾತನಾಡಿದರು.
ಇಟಗಿ ಗ್ರಾಮದಲ್ಲಿ ಬಾಲಭವನ ಅದ್ಯಕ್ಷೆ ಅಂಜಲತಾಯಿ ನಿಂಬಾಳ್ಕರ ನೇತೃತ್ವದಲ್ಲಿ ಗ್ರಾಮz ನೂರಾರುÀ ಮಹಿಳೆಯರು ಮತ್ತು ಯುವಕರು ಸೇರಿಕೊಂಡು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಗ್ರಾಮದ ಬೀದಿಗಳಲ್ಲಿ ಮಹಿಳೆಯರೊಂದಿಗೆ ಕುಂಭಮೇಳದಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ :
ತಾಲೂಕಿನ ಇಟಗಿಯ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಕನಕದಾಸರ 530ನೇ ಜಯಂತಿಯನ್ನು ಆಚರಿಸಲಾಯಿತು. ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಚೇರಮನ್ನ ವಿ.ಎಂ.ತುರಮರಿ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಕನ್ನಡ ಮತ್ತು ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ ಅಂಥವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ಎಂದರು.
ಉಪನ್ಯಾಸಕ ಕೆ.ಬಿ.ಕಾಪೋಲಿ ಕನಕದಾಸರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕ ಎಸ್.ಸಿ.ಹಿರೇಮಠ, ವಿದ್ಯಾರ್ಥಿಗಳಾದ ಸುರಜ ಮಠದ, ಅಂಜನಾ ಸಣ್ಣಪಾಗಾದ ಕನಕದಾಸರ ಕಿರ್ತನೆಗಳನ್ನು ಹಾಡಿದರು. ಅಣ್ಣಪೂರ್ಣಾ ಅಂಬೋಜಿ, ಅಶ್ವಿನಿ ಜುಂಜೆನ್ನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ.ಎಸ್.ಸಾಣಿಕೊಪ್ಪ, ಕೋಶಾಧಿಕಾರಿ ವಿಜಯ ಸಾಣಿಕೊಪ್ಪ ನಿರ್ದೇಶಕರಾದ ಬಿ.ವಿ.ಬೆಣಚಮರ್ಡಿ, ಎಸ್.ಪಿ.ಸಾಣಿಕೊಪ್ಪ, ವಿ.ವಿ.ಗಣಾಚಾರಿ, ಬಿ.ಕೆ.ನಾವಲಗಟ್ಟಿ ಪ್ರಾಚಾರ್ಯ ಜಿ.ಬಿ.ನಾಯ್ಕರ, ಪದವಿ ಕಾಲೇಜ ಪ್ರಾಚಾರ್ಯ ಆರ್.ಬಿ.ಹುಣಶೀಕಟ್ಟಿ, ಮುಖ್ಯಾಧ್ಯಾಪಕರಾದ ಎಸ್.ಬಿ.ಮೆಹತ್ರಿ, ಬಿ.ಬಿಚಂದರಗಿ ಹಾಗೂ ಎಸ್.ಎಸ್.ಶಾಸ್ತ್ರಿ, ಎಸ್.ಎಲ್.ಅಂಬಿಗರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕೆ.ಟಿ.ತಳವಾರ ಸ್ವಾಗತಿಸಿದರು. ಎಸ್.ಕೆ.ಕುರಗುಂದ ನಿರೂಪಿಸಿ, ವಂದಿಸಿದರು.