RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ

ಗೋಕಾಕ:ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ 

ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಅರವಿಂದ ದಳವಾಯಿ

ಗೋಕಾಕ ನ 7: ಕೀರ್ತನೆ-ಹರಿಕಥಾಮೃತ ಸಾರಗಳ ಮೂಲಕ ನಾಡಿನೂದ್ದಕ್ಕೂ ಸಂಚರಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಕಾರ್ಯಗಳನ್ನು ಕನಕದಾಸರು ಮಾಡಿದ್ದಾರೆ. ಸಾಮಾಜಿಕ ಮೌಡ್ಯತೆಗಳನ್ನು ಹೋಗಲಾಡಿಸಿದ ಮಹಾದಾರ್ಶನಿಕರು ಎಂದು ಕರ್ನಾಟಕ ಸಂಯುಕ್ತ ಜನತದಾಳ ಉಪಾಧ್ಯಕ್ಷ ಅರವಿಂದ ದಳವಾಯಿ ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಎಂ.ಎಂ.ದಳವಾಯಿ ಪ್ರೌಢಶಾಲೆಯಲ್ಲಿ ಜರುಗಿದ 530 ನೇ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ ಸ್ವಾತಂತ್ರ್ಯದ ನಂತರ ನಾವು ಸಂವಿದಾನದ ಮೂಲಕ ಶಿಕ್ಷಣ, ಸಾಮಾಜಿಕ ಸಮಾನತೆ, ರಾಜಕೀಯ ಸ್ವಾತಂತ್ರ್ಯ ಮೊದಲಾದವುಗಳನ್ನು ಅನುಭವಿಸುವಂತಾಗಿದೆ. ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ಶೂದ್ರರಿಗೆ ಯಾವುದೇ ರೀತಿಯ ಸ್ವಾತಂತ್ರ್ಯಗಳಿರಲಿಲ್ಲ. 12ನೇ ಶತಮಾನದಲ್ಲಿ ಬಸವಣ್ಣನವರು, 16ನೇ ಶತಮಾನದಲ್ಲಿ ಭಕ್ತ ಕನಕದಾಸರು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ದಸ್ತಗೀರಸಾಬ ಎಂ. ಡಬರಲಿ ಮಾತನಾಡಿ ಕನಕದಾಸರು ಜಾತಿ-ಮತ-ಪಂಥಗಳನ್ನು ಮೀರಿ ಬೆಳೆದ ಸಮಾಜ ಸುಧಾರಕ ಮಾನವೀಯ ಮೌಲ್ಯಗಳನ್ನು ತಾವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆ ತಮ್ಮ ಕೀರ್ತನೆಗಳಲ್ಲಿಯೂ ಮಾನವೀಯತೆ ಕುರಿತಾಗಿ ಬರೆದಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಗಪ್ಪ ಕಳ್ಳಿಗುದ್ದಿ, ಸಿದ್ದಪ್ಪ ಹುಂಡರದ, ಕೊಳ್ಳಾರ, ಪಾಚ್ಚಾಪೂರ ಮುಂತಾದವರು ಉಪಸ್ಥಿತರಿದ್ದರು.
ವಿವೇಕ ಹಳ್ಳೂರ ಸ್ವಾಗತಿಸಿದರು, ಎಸ್.ಎಸ್.ಖಡಕಬಾವಿ ನಿರೂಪಿಸಿದರು, ವಿ.ಕೆ.ಬಂಡಿವಡ್ಡರ ವಂದಿಸಿದರು.

Related posts: