RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಗೋಕಾಕ:ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ 

ಅಮಾನ್ಯೀಕರಣಕ್ಕೆ ವರ್ಷ : ಗೋಕಾಕದಲ್ಲಿ ಯುವ ಕಾಂಗ್ರೇಸ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಗೋಕಾಕ ನ 8 : ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ಜಾರಿಯನ್ನು ವಿರೋಧಿಸಿ ಬುಧವಾರ ರಾಷ್ಟ್ರದೆಲ್ಲೆಡೆ ಕಾಂಗ್ರೇಸ ವತಿಯಿಂದ ಕರಾಳ ದಿನಾಚರಣೆ ಹಮ್ಮಿಕೊಂಡಿದ್ದನ್ನು ಬೆಂಬಲಿಸಿ ಗೋಕಾಕಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ
ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಬುದವಾರ ಮುಂಜಾನೆ ನಗರದ ಸಚಿವರ ಕಾರ್ಯಾಲಯದಲ್ಲಿ ಸೇರಿದ ಕಾಂಗ್ರೇಸ ಕಾರ್ಯಕರ್ತರು ಕೇಂದ್ರ ಸರಕಾರದ ನೋಟ ಅಮಾನ್ಯೀಕರಣ ಮತ್ತು ಜಿ.ಎಸ್.ಟಿ ನಿರ್ಧಾರವನ್ನು ಖಂಡಸಿದರು

ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ , ಭಾರತದ ಅರ್ಥವ್ಯವಸ್ಥೆಯ ಪಾಲಿಗೆ ಸರಕಾರ ಕೈಗೊಂಡ ಈ ವಿನಾಶಕಾರಿ ನಿರ್ಧಾರದಿಂದ ದೇಶದ ಸಮಾನ್ಯ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು

ನಂತರ ಕಛೇರಿಯಿಂದ ಮಿನಿ ವಿಧಾನ ಸೌಧ ವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ್ ಮುಂಖಾತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು

ಈ ಸಂದರ್ಭದಲ್ಲಿ ವಿವೇಕ ಜತ್ತಿ , ನವಿನ ಉಪ್ಪಾರ , ಎಸ ಎ ಕೋತವಾಲ , ಸುರೇಶ ದಳವಾಯಿ, ಸುಧೀರ ಜೋಡಟ್ಟಿ , ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: