ಬೆಳಗಾವಿ:ಶಾಸಕ ಸಂಜಯ ವಿರುದ್ಧ ದೂರು ದಾಖಲು
ಶಾಸಕ ಸಂಜಯ ವಿರುದ್ಧ ದೂರು ದಾಖಲು
ಬೆಳಗಾವಿ ನ 8: ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಟಿಪ್ಪು ಜಯಂತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ವಿಎಚ್ ಪಿ ಸಂಘಟನೆ ನಾಯಕ ಸ್ವರೂಪ ಕಾಲಕುಂದ್ರಿ ವಿರುದ್ಧ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.
ಡಿಸಿ ಕಚೇರಿ ಎದುರು ಬಿಜೆಪಿ, ವಿಎಚ್ ಪಿ, ಆರ್ ಎಸ್ ಎಸ್, ಶ್ರೀರಾಮ ಸೇನಾ ಸೇರಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭ ರೋಷದ ಅವಸರದಲ್ಲಿ ಸಂಜಯ ಪಾಟೀಲ ಮತ್ತು ಸ್ವರೂಪ ಕಾಲಕುಂದ್ರಿ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಶಬ್ದಗಳಲ್ಲಿ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅವರ ಮಾತಿನ ದಾಟಿ ದಾಖಲು ಮಾಡಿಕೊಂಡಿದ್ದ ಪೊಲೀಸ್ ಇಲಾಖೆ ಇಂದು ಪ್ರಚೋದನಾತ್ಮಕ ನಡೆ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 143, 153, 283 ಹಾಗೂ 147 ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸ್ ಕಮಿಷ್ನರ್ ಟಿ ಜಿ. ಕೃಷ್ಣಭಟ್ ಮಾಹಿತಿ ನೀಡಿದರು. ಡಿಸಿಪಿ ಸೀಮಾ ಲಾಟಜರ, ಅಮರನಾಥರೆಡ್ಡಿ ಉಪಸ್ಥಿತರಿದ್ದರು