RNI NO. KARKAN/2006/27779|Monday, December 23, 2024
You are here: Home » breaking news » ಚಿಕ್ಕೋಡಿ:130 ಅಡಿ ಆಳಕ್ಕೆ ಬಿದ್ದು ಬೈಕ್ ಸವಾರನ ಸಾವು : ಮಿರಾಪೂರಹಟ್ಟಿ ಗ್ರಾಮದಲ್ಲಿ ಘಟನೆ

ಚಿಕ್ಕೋಡಿ:130 ಅಡಿ ಆಳಕ್ಕೆ ಬಿದ್ದು ಬೈಕ್ ಸವಾರನ ಸಾವು : ಮಿರಾಪೂರಹಟ್ಟಿ ಗ್ರಾಮದಲ್ಲಿ ಘಟನೆ 

130 ಅಡಿ ಆಳಕ್ಕೆ ಬಿದ್ದು ಬೈಕ್ ಸವಾರನ  ಸಾವು : ಮಿರಾಪೂರಹಟ್ಟಿ ಗ್ರಾಮದಲ್ಲಿ ಘಟನೆ

ಚಿಕ್ಕೋಡಿ ನ 9: ಬೈಕ್ ನಿಯಂತ್ರಣ ತಪ್ಪಿದ ಸವಾರ 130 ಅಡಿ ಆಳದ ಬಾವಿಗೆ ಬಿದ್ದ ಘಟನೆ ಚಿಕ್ಕೋಡಿ ತಾಲೂಕಿನ ಮಿರಾಪೂರಹಟ್ಟಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ
ಈ ಹಿನ್ನೆಲೆ ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬೈಕ್‌ನ ಹಿಂಬದಿ ಸವಾರಳಾಗಿದ್ದ ಅಕ್ಕವ್ವಾ ಖೋತ (30) ಳನ್ನು ಅಗ್ನಿಶಾಮಕ ದಳದಿಂದ ರಕ್ಷಿಸಲಾಗಿದೆ. ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೈಕ್ ಸವಾರ ಲಕ್ಕಪ್ಪ ಬೂದಿಹಾಳನ (30) ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. 

ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ಮುಂದುವರೆದಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related posts: