RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ

ಘಟಪ್ರಭಾ:ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ 

ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ : ಶಾಸಕ ಬಾಲಚಂದ್ರ

ಘಟಪ್ರಭಾ ನ 10 : ಸಂತ ಕನಕದಾಸರು ಸಾರಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಆದರೂ ಕನಕದಾಸರು ಕಂಡ ಕನಸು ನನಸಾಗಿಲ್ಲ. ಜಾತಿ, ಬೇಧ, ಭಾವವೇ ಇದಕ್ಕೆ ಕಾರಣವೆಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದ ಕನಕದಾಸರ ಜಯಂತಿ ನಿಮಿತ್ಯ ಹಮ್ಮಿಕೊಂಡ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಎಲ್ಲರೂ ಒಂದು. ಜಾತಿ ಬೇಧ ಮಾಡದೇ ಸರ್ವರೂ ಸಮಾನರು. ಎಲ್ಲ ಜಾತಿಗಳು ಒಂದು ಎಂದು ಸಂದೇಶ ನೀಡಿದ್ದರು. ಆದರೆ ಅಂತಹ ಸಂದೇಶಗಳು ಇದುವರೆಗೂ ಪಾಲನೆಯಾಗದೆ ಪ್ರತಿಯೊಂದರಲ್ಲೂ ಜಾತಿ ಬೇಧ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇವರಲ್ಲಿ ಯಾರೂ ಇದೇ ಜಾತಿಗೆ ಹುಟ್ಟಬೇಕೆಂದು ಅರ್ಜಿ ಹಾಕಿಲ್ಲ. ಹಿಂದುಳಿದ ವರ್ಗದವರೆಂದು ಹಣೆಪಟ್ಟಿ ಇಂದಿಗೂ ಬಿಟ್ಟಿಲ್ಲ. ರಾಜ್ಯದಲ್ಲಿ ಜಾತಿ ಜನಗಣತಿ ಪ್ರಕಾರ ಕುರುಬ ಸಮಾಜ ಬಾಂಧವರು 4ನೇ ಸ್ಥಾನದಲ್ಲಿದ್ದಾರೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಈ ಸಮಾಜ ಮುಂದೆ ಬರಬೇಕಾಗಿದ್ದು, ಅದರಲ್ಲೂ ಶಿಕ್ಷಣಕ್ಕೆ ಹೆಚ್ಚಿನಾಧ್ಯತೆ ನೀಡುವಂತೆ ಕೋರಿದರು.

ಕಳೆದ 5 ವರ್ಷಗಳಲ್ಲಿ ಆಗದ ಮಳೆ ಈ ಬಾರಿ ಉತ್ತಮ ಮಳೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಾರ್ಚ, ಎಪ್ರೀಲ್, ಮೇ ತಿಂಗಳಲ್ಲಿ ಬೇಸಿಗೆ ಬರುವುದರಿಂದ ಹಿಡಕಲ್ ಜಲಾಶಯದಲ್ಲಿ ಈಗಿರುವ ನೀರನ್ನು ಅಲ್ಲಿಯವರೆಗೆ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ 45 ಟಿಎಂಸಿ ನೀರು ಸಂಗ್ರಹವಿದ್ದು, ರೈತರ ಅಗತ್ಯತೆಗನುಗುಣವಾಗಿ ನೀರನ್ನು ಕಾಲುವೆಗಳಿಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 6.69 ಕೋಟಿ ರೂ. ವೆಚ್ಚದ ರಾಜಾಪೂರ ಚೂನಿಮಟ್ಟಿ ಸಂಗನಕೇರಿ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು ಇದರಿಂದ ಸಂಚಾರಕ್ಕೆ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ರಾಜಾಪೂರ ಗ್ರಾಮಸ್ಥರ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ರಾಜಕೀಯ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಸಮಾನತೆಯನ್ನು ಬಿಂಬಿಸಿದ ಕನಕದಾಸರು ಶ್ರೇಷ್ಠ ಮೇಧಾವಿಗಳಾಗಿದ್ದರು. ಸಮಪಾಲು-ಸಮಬಾಳು ಇವರ ಧ್ಯೇಯವಾಗಿತ್ತು. ನಮ್ಮ ಸಮಾಜವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಸಮಾಜವನ್ನು ಗೌರವಿಸಬೇಕಾದ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಹಿಂದುಳಿದ ವರ್ಗಕ್ಕೆ ಅಧಿಕಾರ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಗೋಕಾಕ ತಾಲೂಕಿನಲ್ಲಿ 1990 ರಿಂದ ಜಾರಕಿಹೊಳಿ ಸಹೋದರರು ಎಲ್ಲ ಜನಾಂಗಕ್ಕೆ ಅಧಿಕಾರ ನೀಡುತ್ತ ಬಂದಿದ್ದಾರೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಗೌರವಿಸುವ ವ್ಯಕ್ತಿತ್ವ ಜಾರಕಿಹೊಳಿ ಸಹೋದರರು ಹೊಂದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಘಯೋನೀಬಸ ಸಂಘದ ನಿರ್ದೇಶಕ ಬಸಪ್ಪ ಪಂಡ್ರೊಳ್ಳಿ, ರಾಮಚಂದ್ರ ಪಾಟೀಲ, ಭೈರಪ್ಪ ಯಕ್ಕುಂಡಿ, ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಜಟ್ಟೆನ್ನವರ, ಸಂಗಯ್ಯಾ ಹುನ್ನೂರ, ಸುರೇಶ ಪತ್ತಾರ, ವಾಸಪ್ಪ ಪಂಡ್ರೊಳ್ಳಿ, ಉದ್ದಪ್ಪ ಜಟ್ಟೆನ್ನವರ, ಮುರಳಿ ಬಡಿಗೇರ, ಮುಂತಾದವರು ವೇದಿಕೆಯಲ್ಲಿದ್ದರು.

Related posts: