RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ

ಗೋಕಾಕ :ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ 

ಟೀಪು ಜಯಂತಿ ನಿಮಿತ್ತ ಸ್ವಚ್ಛತಾ ಕಾರ್ಯ , ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಣೆ
ಗೋಕಾಕ ನ 11 : ಸ್ವಚ್ಛ ಬಾರತ ಯೋಜನೆಯ ಅದ್ಭುತ ಕನಸಿನಲ್ಲಿರುವ ಯುವಕರು ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಗುಡಿ-ಗೋಪುರ; ಮಸೀದಿ-ಮಂದಿರ, ಶಾಲೆ-ಕಾಲೇಜುಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಪಟ್ಟಣದ ಟೀಪು ಸುಲ್ತಾನ ಯುವಕ ಸಂಘವು ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ ಟೀಪು ಸುಲ್ತಾನ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂಗೊಳ್ಳಿ ರಾಯಣ್ಣ ಬಸ್ ತಂಗುದಾನ, ಟೀಪು ಸುಲ್ತಾನ ಸಭಾ ಮಂಟಪ, ಜುಮ್ಮಾ ಮಸೀದಿ, ಉದ್ದಮ್ಮ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಗಳನ್ನು ಸಂಘದ ಯುವಕರಾದ ರಫೀಕ ಅ. ಜಮಾದಾರ, ಅಸ್ಲಂ ಲಾ. ಮುಲ್ತಾನಿ, ಬಿಲಾಲ ರ. ಮುಲ್ತಾನಿ ಮುಬಾರಕ ಮುಲ್ತಾನಿ, ಅಲ್ಲಾವುದ್ದೀನ ಮುಲ್ತಾನಿ, ಇಬ್ರಾಹಿಂ ಮುಲ್ತಾನಿ ಫೈರೋಜ ಮುಲ್ತಾನಿ, ಮೊಹಮ್ಮದಉಸ್ಮಾನ ಮುಲ್ತಾನಿ, ಮೈಬುಸಾಬ ಜಮಾದಾರ, ದಸ್ತಗೀರಸಾಬ ಮುಲ್ತಾನಿ, ಅಲ್ಲಾಭಕ್ಷ ಹುನ್ನೂರ ಮಂತಾದ ಯುವಕರೊಂದಿಗೆ ಗ್ರಾ.ಪಂ. ಸದಸ್ಯರಾದ ಜಕೀರಸಾಬ ಜಮಾದಾರ, ಶೌಕತಲಿ ಫರಾಸ ಮುಂತಾದ ಜನಪ್ರತಿನಿಧಿಗಳು ಸ್ವಚ್ಛತಾ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗ್ರಾ.ಪಂ. ಕಾರ್ಯಾಲಯದಲ್ಲಿ ಆಚರಣೆ:

ಪಟ್ಟಣದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಹಜರತ್ ಟೀಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ರಾಯಪ್ಪ ಬಳೋಲದಾರ ಟೀಪು ಸುಲ್ತಾನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಾಡ ಕಚೇರಿಯಲ್ಲಿ ಪೂಜೆ:

ಕೌಜಲಗಿ ಉಪ ತಹಶೀಲ್ದಾರರ ಕಚೇರಿಯಲ್ಲಿ ಟೀಪು ಸುಲ್ತಾನ ಅವರ 265 ಜಯಂತಿಯನ್ನು ಆಚರಿಸಲಾಯಿತು. ಉಪತಹಶೀಲ್ದಾರ ಬಿ.ಐ.ದೇವಡಿ ಟೀಪು ಸುಲ್ತಾನ ಫೋಟೊಗೆ ಪೂಜೆ ಸಲ್ಲಿಸಿದರು.

ಜ್ಞಾನಗಂಗೋತ್ರಿ ಶಾಲೆಯಲ್ಲಿ ಆಚರಣೆ:

ಪಟ್ಟಣದ ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲೆಯಲ್ಲಿ ಹಜರತ ಟೀಪು ಸುಲ್ತಾನ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಚೇರಮನ್ ಶಿವಾನಂದ ಲೋಕನ್ನವರ ಪೋಜೆ ಸಲ್ಲಿಸಿದರು. ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ:

ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಟೀಪು ಸುಲ್ತಾನ ಜಯಂತಿಯನ್ನು ಆಚರಿಸಿದರು. ಪ್ರಾಚಾರ್ಯ ಎಂ.ಕೆ.ಹಾದಿಮನಿ ಟೀಪು ಸುಲ್ತಾನ ಭಾವಚಿತ್ರಕ್ಕೆ ಪೂಜೇ ಸಲ್ಲಿಸಿದರು. ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

(ವಿ.ಸೂ. ದಯವಿಟ್ಟು ಯಾರು ಕಾಫೀ ಮಾಡಬೇಡಿ. ಸುದ್ದಿಯಲ್ಲಿ ಸ್ವಂತ ಪ್ರಯತ್ನ ಮತ್ತು ಸ್ವಂತಿಕೆ ಇರಲಿ)

Related posts: