RNI NO. KARKAN/2006/27779|Friday, November 22, 2024
You are here: Home » breaking news » ಬೈಲಹೊಂಗಲ:ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ

ಬೈಲಹೊಂಗಲ:ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ 

ನೇಗಿನಹಾಳದಲ್ಲಿ ಕುರುಬ ಗೋಲ್ಲಾಳೇಶ್ವರ ಅದ್ಧೂರಿ ಜಯಂತಿಯೋತ್ಸವ.

ಬೈಲಹೊಂಗಲ ನ 11: ಸಮಾನತೆಯ ಸಾರಿದ ಅಪ್ಪ ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಹುಟ್ಟಿದವರಿಗೆ ಬಸವತತ್ವದ ಅದ್ಯಯನವಿಲ್ಲದ್ದರಿಂದ ಇಂದು ಮತ್ತೆ ಸಂಪ್ರದಾಯಗಳ ಜೋತು ಬೀಳುತ್ತಿರುವುದು ಅತ್ತಂತ ವಿಷಾದದ ಸಂಗತಿಯಾಗಿದೆ ಎಂದು ಕಿತ್ತೂರ ಮೇಟ್ಯಾಲ ಬಸವ ಮಂಟಪದ ಅದ್ಯಕ್ಷ ಶಿವಾನಂದ ಮಾಳಗಿ ಹೇಳಿದರು.
ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಬಸವ ಕೇಂದ್ರ, ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಅಕ್ಕನ ಬಳಗದ ನೇತೃತ್ವದಲ್ಲಿ ಬಸವಾದಿ ಶರಣ ಕುರುಬ ಗೋಲ್ಲಾಳೇಶ್ವರ ಜಯಂತಿಯೋತ್ಸವ ಆಯೋಜಿಸಿದ್ಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರು ಬಸವಣ್ಣನವರು ಶೋಷಿತ ಕೆಳವರ್ಗದವರನ್ನು ಅಪ್ಪಕೊಂಡು ಅನುಭವ ಮಂಟಪ ಕಟ್ಟಿದ್ದರು ಅದರಲ್ಲಿ ನಮ್ಮ ಹಾಲುಮತ ಸಮಾಜವು ಒಂದಾಗಿತು. ನಾನು ಹುಟ್ಟಿದ್ದು ಹಾಲುಮತ ಸಮಾಜದಲ್ಲಿ ನನ್ನ ಧರ್ಮ ಲಿಂಗಾಯತ ಎಂದು ಹೆಮ್ಮೆಯಿಂದ ಹೇಳಿಕೋಳ್ಳುತ್ತೆನೆ ಎಂದರು.
ಜಗದ್ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ಸಾನಿದ್ಯವಹಿಸಿ ಮಾತನಾಡಿ 900ವರ್ಷಗಳಿಂದ ಬಸವಾದಿ ಶರಣರ ತತ್ವಸಿದ್ಧಾಂತಗಳನ್ನು ತುಳಿಯುತ್ತಲೇ ಬರುತ್ತಿದ್ಧಾರೆ ಆದರೆ ಯುಗ-ಯುಗಗಳು ಕಳೆದರು ಶರಣರವಾಣಿ ಸತ್ಯಶುದ್ಧವಾದದ್ದು ಎಂದರು. ಶತಮಾನಗಳಿಗೊಬ್ಬರಂತೆ ಹಲವಾರು ದಾರ್ಶನಿಕರು, ಮಹಾನ್ ಪುರುಷರು ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದ್ಧಾರೆ ಅದರಲ್ಲಿ ನಮ್ಮ ಕನಕದಾಸರು ಅತ್ಯಂತ ಶ್ರೇಷ್ಠರು ದಾಸ ಸಾಹಿತ್ಯಕ್ಕೆ ಅತ್ಯುನ್ನತ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರು ಕೆಳವರ್ಗದಲ್ಲಿ ಜನಿಸಿದ್ದರಿಂದ ಅವರ ಸಾಹಿತ್ಯಕ್ಕೆ ಮೆಲ್ವರ್ಗದ ದಾಸರಂತೆ ಜನಪ್ರೀಯತೆ ದೊರೆಯಲ್ಲಿಲ್ಲ ಎಂಬುವುದು ವಿಷಾದದ ಸಂಗತಿಯಾಗಿದೆ ಎಂದರು.

ಜಗದೀಶ ಭಜೇರಿ ಕುರುಬ ಗೋಲ್ಲಾಳೇಶ್ವರರ ಕುರಿತು ಉಪನ್ಯಾಸ ನೀಡಿದರು. ಹಾಲುಮತ ಸಮಾಜದ ಮುಖಂಡ ಗ್ರಾ.ಪಂ ಸದಸ್ಯ ಕರೇಪ್ಪ ಭೂತಾಳಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ರಾಜ್ಯಾದ್ಯಕ್ಷ ಬಸವರಾಜ ಕಡೇಮನಿ ರಂಜಾನ ಧರ್ಗಾ ಬರೆದಿರುವ ಲಿಂಗಾಯತ ಧರ್ಮದ ಸತ್ಯದರ್ಶನ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ವಿತರಿಸಿದರು. ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಸದಸ್ಯ ಸುರೇಶ ತಿಗಡಿ, ಮಡಿವಾಳಪ್ಪ ಅಸುಂಡಿ, ಶ್ರೀಶೈಲ ಮರಿಗೌಡರ, ಬೈಲಹೊಂಗಲ ಬಸವ ಕೇಂದ್ರದ ಮುಖಂಡ ಬಸವರಾಜ ಹುಬ್ಬಳ್ಳಿ, ಹನುಮಂತಪ್ಪ ಬೆಳವಡಿ, ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು. ಮಂಜುನಾಥ ಮಡಿವಾಳರ ವಚನ ಗಾಯನ ಮಾಡಿದರು, ಸಿದ್ಧಾರೂಡ ತಿಗಡಿ ಸ್ವಾಗತಿಸಿದರು, ಶ್ರೀಶೈಲ ತೋರಣಗಟ್ಟಿ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.

Related posts: