ಬೆಳಗಾವಿ:ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ
ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ
ಬೆಳಗಾವಿ ನ 13 : ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಜಾತಿ ಸಾಮರಸ್ಯ ಕೆಡೆಸಲು ಎಮ್. ಇ. ಎಸ್ ನಾಯಕರು ಪ್ರತಿ ವರ್ಷದಂತೆ ಈ ವರ್ಷವೂ ನಗರದ ವ್ಯಾಕ್ಸೀನ ಡಿಪೊದಲ್ಲಿ ಮಹಾಮೇಳಾವ ನಡೆಸಲು ತಯಾರಿ ನಡೆಸಿದೆ. ಆದರೆ ಮಹಾರಾಷ್ಟ್ರ ದಿಂದ ಮುಖಂಡರನ್ನು ಅಥವಾ ಸಚಿವರನ್ನು ಕರೆಸಿ ಅವರಿಂದ ಮಹಾರಾಷ್ಟ್ರ ಪರ ಘೋಷಣೆ ಕೂಗಿಸಿ ಝಾಲಾಚ್ ಪಾಹಿಜೆ ಎನ್ನಿಸಲು ಕಾತುರದಿಂದ ಕಾಯುತ್ತಿದ್ದ ಸ್ಥಳೀಯ ಎಮ.ಇ.ಎಸ್ ನಾಯಕರಿಗೆ ಈಗ ದಿಕ್ಕು ತೋಚದಂತಾಗಿದೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಹಾರಾಷ್ಟ್ರ ದ ಮುಖಂಡರ ಜಿಲ್ಲಾ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ. ರವಿವಾರ(ನೆ. 12) ರಾತ್ರಿ 10 ಗಂಟೆ ಯಿಂದ ಮಂಗಳವಾರ (ನೆ.14) ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ನಾಳಿನ ಮಹಾ ಮೇಳಾವವು ಮಹಾರಾಷ್ಟ್ರ ಮುಖಂಡರಿಲ್ಲದೆ ಬಿಕೋ ಎನ್ನಲಿದೆ