RNI NO. KARKAN/2006/27779|Thursday, December 12, 2024
You are here: Home » breaking news » ಬೆಳಗಾವಿ:ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ

ಬೆಳಗಾವಿ:ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ 

ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ
ಬೆಳಗಾವಿ ನ 13: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಇಂದಿನಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಚಳಿಗಾಲ ಅಧಿವೇಶನ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲ್ಲಿದೆ

ಇದು ಕಾಂಗ್ರೆಸ್ ಸರಕಾರದ ಕೊನೆಯ ಅಧಿವೇಶನವಾಗಿದ್ದು ಸಿದ್ದರಾಮಯ್ಯ ಈ ಉಭಯ ಸದನಗಳ ಅಧಿವೇಶನದಲ್ಲಿ ಯಾವ ನಿರ್ಧಾರ ಮತ್ತು ವಿಧೇಯಕಗಳನ್ನು ಮಂಡಿಸಲ್ಲಿದೆ ಎಂಬ ಹಲವು ಕೂತುಹಲಗಳನ್ನು ಈ ಅಧಿವೇಶನ ಹೊಂದಿದೆ ಅದರಲ್ಲೂ ಪ್ರಮುಖವಾಗಿ ಕಳೆದ ಏಂಟು ವರ್ಷಗಳಿಂದ ಬೆಳಗಾವಿಯಲ್ಲಿ ಸರಕಾರಗಳು ಅಧಿವೇಶನ ನಡೆಯಿಸಿ ಉತ್ತರ ಕರ್ನಾಟಕಕ್ಕೆ ಪೂರಕವಾಗುವಂತಹ ಯಾವುದೇ ಅಚಲವಾದ ನಿರ್ಧಾರಗಳನ್ನು ತೆಗೆದುಕೊಂಡಿಲಾ ಈ ಭಾರಿಯಾದರು ಸಿದ್ದರಾಮಯ್ಯ ನವರ ಸರಕಾರ ಈ ಭಾಗದ ಜನತೆಗೆ ಪೂರಕವಾದಂತಹ ವಿಚಾರಗಳನ್ನು ವಿಧೇಯಕಗಳನ್ನು ಮಂಡಿಸಲ್ಲಿದೆ ಎಂಬ ಆಶಾ ಭಾವನೆ ಇಲ್ಲಿಯ ಜನರದ್ದಾಗಿದೆ

ಸುಮಾರು ಹತ್ತು ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಘಟಿಸಿರುವ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಬಿಜೆಪಿಗೆ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಎತ್ತಿಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಹಣಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ.

ಉಳಿದಂತೆ ಬಿಜೆಪಿ ಅವಧಿಯಲ್ಲಿ ವಿದ್ಯುತ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ, ಟಿಪ್ಪು ಜಯಂತಿ ಆಚರಣೆ, ಗೌರಿ ಹತ್ಯೆ, ರೈತರ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾದ ಹಾನಿ ಇವೆಲ್ಲಾ ಚರ್ಚೆಗೆ ಕಾರಣವಾಗುವ ವಿಷಯಗಳಾಗಿವೆ. 

ಪ್ರಮುಖವಾಗಿ ಕೇಳಿಬರುತ್ತಿರುವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾಪದ ಬಗ್ಗೆಯೂ ವಾಕ್ಸಮರ ನಡೆಯುವ ಸಂಭವ ಹೆಚ್ಚಾಗಿದೆ.
ಇನ್ನು ಸುಮಾರು 15 ವಿವಿಧ ಸಂಘಟನೆಗಳು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲು ಸಿದ್ಧವಾಗಿವೆ. ಜತೆಗೆ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೇತೃತ್ವದಲ್ಲಿ ವೈದ್ಯರು ಇಂದು ಬೆಳಗಾವಿ ಚಲೋ ನಡೆಸಲಿದ್ದಾರೆ.

Related posts: