ಬೆಳಗಾವಿ:ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ
ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ
ಬೆಳಗಾವಿ ನ 13 : ಕರ್ನಾಟಕ ಸರಕಾರ ಮತ್ತು ಬೆಳಗಾವಿ ಅಧಿವೇಶನಕ್ಕೆ ಸೆಡ್ಡು ಹೊಡೆದು ಆಯೋಜಿಸಿರುವ ಎಂಇಎಸ್ ನ ಮಹಾಮೇಳಾವ ವಿರೋಧಿಸಿ ಕನ್ನಡ ಸಂಘಟನೆಗಳು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆಗಳು ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಜಿಲ್ಲಾಡಳಿತ ಅನುವು ಮಾಡಬಾರದಾಗಿತ್ತು, ಪೊಲೀಸ್ ಇಲಾಖೆ ಅನುಮತಿ ಕೊಟ್ಟ ತಪ್ಪು ಮಾಡಿದೆ ಎಂದು ಕನ್ನಡ ಹೋರಾಟಗಾರರು , ಕರವೇ, ಕನ್ನಡ ಕ್ರಿಯಾ ಸಮಿತಿ, ಕಯುವೇ ಸೇರಿದಂತೆ ಇತರ ಸಂಘಟನೆಗಳು ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ
ತದನಂತರ ವ್ಯಾಕ್ಸಿನ ಡಿಪೋದಲ್ಲಿ ಎಂಇಎಸ ಆಯೋಜಿಸಿರುವ ಮೇಳಾವವನ್ನು ತಡೆಯಲು ಹೋರಟ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಎಪಿಎಂಸಿ ಪೊಲೀಸ ಠಾಣೆಗೆ ಕರೆದುಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ
ಅಶೋಕ ಚಂದರಗಿ , ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಕೃಷ್ಣಾ ಖಾನಪ್ಪನವರ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದರು