RNI NO. KARKAN/2006/27779|Saturday, December 14, 2024
You are here: Home » breaking news » ಘಟಪ್ರಭಾ:ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ

ಘಟಪ್ರಭಾ:ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ 

ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ

ಘಟಪ್ರಭಾ ನ 13: ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ್ ಮುಖಂಡರ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷ ಕರಾಳ ದಿನ ಮತ್ತು ಮಹಾಮೇಳಾವ ನಡೆಸಲು ಅನುಮತಿ ನೀಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಅವರು ರವಿವಾರದಂದು ತಾಲೂಕಿನ ಅರಭಾಂವಿ ಗ್ರಾಮದಲ್ಲಿ ನೂತನ ಕ.ರ.ವೇ ಶಾಖೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ರಾಜಕೀಯ ನಾಯಕರು ವೋಟ್‍ಬ್ಯಾಂಕ ರಾಜಕೀಯ ಮಾಡಿ ತೆರೆಮರೆಯಲ್ಲಿ ನಾಡದ್ರೋಹಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರಿಂದ ಅಧಿಕಾರಿಗಳು ಎಂ.ಇ.ಎಸ್‍ಯನ್ನು ನಿಷೇದಿಸಲು ಹಿಂಜರಿಯುತ್ತಿದ್ದಾರೆ. ಪೊಲೀಸ ಕಮೀಶನರ್ ಸಹ ಇನ್ನೂ ಎಂ.ಇ.ಎಸ್‍ನವರು ಮಹಾಮೇಳಾವಕ್ಕೆ ಅನುಮತಿ ಬೇಡಿಲ್ಲ ಎಂದು ಧ್ವಂದ್ವ ಹೇಳಿಕೆ ನೀಡಿ ನಂತರ ಮಹಾಮೇಳಾವ ನಡೆಸಲು ಅವರಿಗೆ ಅನುಮತಿ ನೀಡಿರುವುದು ನಾಚಿಕೆಗೇಡಿ ವಿಷಯ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಇಂತಹ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕ.ರ.ವೇ ಯಿಂದ ಜಿಲ್ಲೆಯ ರಾಜಕೀಯ ನಾಯಕರಿಗೆ ಲಾಟಿ ಸೇವೆ ಮಾಡಲಾಗುವುದೆಂದು ಖಾನಪ್ಪನವರ ಎಚ್ಚರಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಶಿವಾನಂದ ಹಿರೇಮಠ ಸ್ವಾಮಿಗಳು ಆಶೀರ್ವಚನ ನೀಡಿದರು. ಪ್ರೊ. ಎಂ.ಬಿ. ಕುದರಿ ಕನ್ನಡದ ಗತವೈಭವ ಕುರಿತು ಉಪನ್ಯಾಸ ನೀಡಿದರು.

ವೇದಿಕೆ ಮೇಲೆ ಅರಭಾಂವಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ರಮೇಶ ಮಾದರ, ಸದಸ್ಯರಾದ ಕುಮಾರ ಪೂಜೇರಿ, ರಾಯಪ್ಪ ಬಂಡಿವಡ್ಡರ ಹಿರಿಯರಾದ ಮೋಹನ ಬಂಡಿವಡ್ಡರ, ಸ್ಥಳೀಯ ಘಟಕದ ನೂತನ ಅಧ್ಯಕ್ಷ ಅಶೋಕ ಬಂಡಿವಡ್ಡರ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ರಹೇಮಾನ ಮೊಕಾಶಿ, ರಾಮ ಸಣ್ಣಲಗಮನ್ನವರ, ಮಲ್ಲಪ್ಪ ಸಂಪಗಾರ, ಮಹಾಂತೇಶ ಹಿರೇಮಠ, ಕಲ್ಲೋಳೆಪ್ಪ ಗಾಡಿವಡ್ಡರ, ಬಸವರಾಜ ಗಾಡಿವಡ್ಡರ, ಗಂಗಪ್ಪಾ ಇಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಿ.ಕೆ. ಬಂಡಿವಡ್ಡರ ನಿರೂಪಿಸಿ ವಂದಿಸಿದರು

Related posts: