RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ

ಗೋಕಾಕ:ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ 

ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ

ಗೋಕಾಕ ನ 14: ಜಿಲ್ಲಾಡಳಿತ ವಿಧಿಸಿದ ನಿಷೇದಾಜ್ಞೆಯನ್ನು ದಿಕ್ಕರಿಸಿ ಮಹಾಮೇಳವದಲ್ಲಿ ಭಾಗವಹಿಸಿ ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷರು ಶ್ರೀ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಮಹಾನಾಯಕರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮಂಗಳವಾರ ಮುಂಜಾನೆ ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಎಂಇಎಸ ಸಂಘಟನೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು 

 

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಶ್ರೀ ಬಸವರಾಜ ಖಾನಪ್ಪನವರ ಜಿಲ್ಲಾಡಳಿತ ವಿಧಿಸಿದ ಆದೇಶವನ್ನು ಉಲ್ಲಂಘಿಸಿ ರಾಜ್ಯ ಪ್ರವೇಶಿಸಿದ ಮಹಾರಾಜ್ಯದ ನಾಯಕರಾದ ಸಂಸದ ಧನಜಂಜಯ ಮಾಡೀಕ, ಚಂದಗಡ ಶಾಸಕಿ, ಸಂದ್ಯಾದೇವಿ ಕುಪ್ಪೇಕರ ಮಾಜಿ ಶಾಸಕ ಕೆ.ಪಿ.ಪಾಟೀಲ, ಜಯಂತ ಪಾಟೀಲ ಅವರನ್ನು ಸರಕಾರ ಕೂಡಲೇ ಬಂಧಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕು. ಬೆಳಗಾವಿಯಲ್ಲಿ ಅಧಿವೇಶನ ನಡೆಸುವದಾಗಿ ಉದ್ಧಟತನದ ಹೇಳಿಕೆ ನೀಡಿರುವ ನಾಯಕರು ತಮ್ಮ ನಾಲಿಗೆಯನ್ನು ಬೀಗಿ ಹಿಡಿದು ಮಾತನಾಡುವದನ್ನು ಕಲಿಯಬೇಕು. ಮಹಾರಾಜ್ಯದಲ್ಲಿಯೇ ಸಾಕಷ್ಟು ಸಮಸ್ಯೆಗಳಿರುವಾಗ ಕರ್ನಾಟಕದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಾಡದ್ರೋಹಿ ನಾಯಕರಿಗೆ ಇಲ್ಲ ತಮ್ಮ ರಾಜ್ಯ ಬೆಳೆ ಬೆಯಿಸಿಕೊಳ್ಳಲು ಬೆಳಗಾವಿ ನಾಯಕರು ದಿಕ್ಕು ತಪ್ಪಿಸಿ ಜಿಲ್ಲೆಯಲ್ಲಿ ಶಾಂತಿ ಬಂಗ ಮಾಡುವ ಹೇಯ ಕೃತ್ಯಕ್ಕೆ ಕೈ ಹಾಕಿದ ಇವರನ್ನು ಕೂಡಲೇ ಬಂದಿಸಬೇಕು. ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದರು ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಖಾನಪ್ಪನವರ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಮಲ್ಲಪ್ಪಾ ಸಂಪಗಾರ, ರಮೇಶ ಕಮತಿ, ಗಣಪತಿ ಸಂಪಗಾರ, ಯಮನಪ್ಪಾ ವಗ್ಗನವರ, ವಿಠ್ಠಲ ಜಾಗನೂರ, ಹನೀಪಸಾಬ ಸನದಿ, ಶೆಟ್ಟೆಪ್ಪಾ ಗಾಡಿವಡ್ಡರ, ಅಶೋಕ ಬಂಡಿವಡ್ಡರ, ರಾಜು ಬಂಡಿವಡ್ಡರ, ಬಸು ತೇಲಿ, ಕೃಷ್ಣಾ ಕೆಂಪಣ್ಣಾ ಬಂಡಿವಡ್ಡರ, ಮಲ್ಲಪ್ಪಾ ತಲೆಪ್ಪಗೋಳ, ಕೆಂಪಣ್ಣಾ ಕಡಕೋಳ, ಅಜೀತ ಮಲ್ಲಾಪೂರೆ, ಫಕೀರಪ್ಪಾ ಗಣಾಚಾರಿ, ರವಿ ನಾಂವಿ, ಪರಶುರಾಮ ಗಾಡಿವಡ್ಡರ, ಬಸು ಗಾಡಿವಡ್ಡರ, ಮಲ್ಲಪ್ಪಾ ಹಂಜಿ, ಬಸು ಈರನಟ್ಟಿ, ಯಲ್ಲಾಲಿಂಗ ಕಪ್ಪಲಗುದ್ದಿ, ರಾಮ ಕುಡ್ಡೆಮ್ಮಿ, ರಮೇಶ ಕೆ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: