RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ

ಗೋಕಾಕ:ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ 

ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ

ಗೋಕಾಕ ನ 14 : ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೇ ತಿಂಗಳು ಗೋಕಾಕ ನಗರದಲ್ಲಿ ನಡೆಯುವ ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು

ಅವರು ಮಂಗಳವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು

ನವ ಕರ್ನಾಟಕ ನಿರ್ಮಾಣಕ್ಕಾಗಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಮುಖ್ಯ ಉದ್ದೇಶ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೆಸೆಯುವುದಾಗಿದೆ ಇದಕ್ಕೆ ರಾಜ್ಯಾದ್ಯಂತ ಪೂರಕ ಪ್ರತಿಕ್ರಿಯೆ ದೊರೆಯುತ್ತಿದೆ ಗೋಕಾಕದಲ್ಲಿಯು ಈ ಭಾರೀ ಪರಿವರ್ತನಾ ಗಾಳಿ ಬಿಸಲಿದೆ ಎಂದು ಪೂಜಾರಿ ಆಶಾಭಾವನೆ ವ್ಯಕ್ತಪಡಿಸಿದರು

ಈ ಐತಿಹಾಸಿಕ ಯಾತ್ರೆಯಲ್ಲಿ ಕೇಂದ್ರ ಸರಕಾರದ ಅನಂತ ಕುಮಾರ್ ಹೆಗಡೆ , ಅನಂತಕುಮಾರ್ , ಡಿ.ವಿ.ಸದಾನಂದಗೌಡ , ರಮೇಶ ಜಿಗಜಿನ್ನಗಿ ಮತ್ತು ರಾಜ್ಯದ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ , ಕೆ ಎಸ್ ಈಶ್ವರಪ್ಪ, ಪ್ರಲ್ಹಾದ ಜೋಶಿ , ಶೋಭಾ ಕರಂದ್ಲಾಜೆ , ಉಮೇಶ ಕತ್ತಿ, ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರು ಭಾಗವಹಿಸಲ್ಲಿದ್ದಾರೆ

ಶನಿವಾರದಂದು ಸಂಜೆ ನಡೆಯುವ ಈ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುವ ನಾಯಕರನ್ನು ವಾಲ್ಮೀಕಿ ವೃತ್ತದಿಂದ ಕುಂಭ ಮೇಳ , ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಗುವದು ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ ಪೂಜಾರಿ ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಬಿಜೆಪಿ ನಗರಾಧ್ಯಕ್ಷ ಶಶಿಧರ ದೇಮಶೇಟ್ಟಿ, ಚಿದಾನಂದ ದೇಮಶೆಟ್ಟಿ, ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಸುನೀಲ ಮುರ್ಕಿಬಾವಿ, ಅಡಿವೆಪ್ಪ ಮರಲಿಂಗನವರ, ಬಸವರಾಜ ಹುಳ್ಳೇರ ಇದ್ದರು.

Related posts: