RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಹೆಮ್ಮೆ ಸತೀಶ ಶುರ್ಗಸದ್ದು : ಸಿದ್ದಾರ್ಥ ವಾಡೆನ್ನವರ

ಗೋಕಾಕ:ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಹೆಮ್ಮೆ ಸತೀಶ ಶುರ್ಗಸದ್ದು : ಸಿದ್ದಾರ್ಥ ವಾಡೆನ್ನವರ 

ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ  ಹೆಮ್ಮೆ ಸತೀಶ ಶುರ್ಗಸ್ನದ್ದು : ಸಿದ್ದಾರ್ಥ ವಾಡೆನ್ನವರ 

ಗೋಕಾಕ ನ 15: : ಸತೀಶ ಶುಗರ್ಸ್ ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ  ಎರಡನೇ ಕಂತಿನ ಹಣ ಪ್ರತಿ ಟನ್ ಗೆ 300 ರೂ.ನಂತೆ  ಆಯಾ ರೈತರ  ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. 2016-17ನೇ ಸಾಲಿನ ಹಂಗಾಮಿನಲ್ಲಿ ಪೂರೈಸಿದ ಕಬ್ಬು ತಳಿಗಳಾದ 671, 92005, 94012ಗೆ ಸಂಬಂಧಿಸಿ ಪ್ರತಿ ಟನ್ ಕಬ್ಬಿಗೆ ರೂ.3100 ರೂ. ಮತ್ತು ಇನ್ನುಳಿದ ತಳಿಗಳಿಗೆ ಪ್ರತಿ ಟನ್‍ಗೆ ರೂ.3000 ನಂತೆ  ಸಂಪೂರ್ಣ ಹಣ ಪಾವತಿಸಲಾಗಿದ್ದು, ರೈತರ  ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ ಎಂದು ಗೋಕಾಕದ ಸತೀಶ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ತಿಳಿಸಿದ್ದಾರೆ.

 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,  ರೈತರು ಸಂಬಂಧಿಸಿದ ಬ್ಯಾಂಕ್‍ಗಳಿಗೆ ಸಂಪರ್ಕಿಸಿ ಹಣ ಪಡೆಯಬೇಕು. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಅನಂತ  ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

   2016-17ನೇ ಸಾಲಿನಲ್ಲಿ ಕಾರ್ಖಾನೆ ಘೋಷಿಸಿದ ಒಟ್ಟು ಕಬ್ಬಿನ ಬಿಲ್ ನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ.  ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಕಾರ್ಖಾನೆ ಎಂಬ ಹೆಮ್ಮೆ ನಮ್ಮದಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ವಾಡೆನ್ನವರ ಹರ್ಷ ವ್ಯಕ್ತಪಡಿಸಿದ್ದಾರೆ.

2017-18ನೇ ಸಾಲಿನ ಕಬ್ಬು ನುರಿಸುವ ಹಂಗಾಮು 2017ರ ಅಕ್ಟೋಬರ್ 23ರಿಂದ ಆರಂಭವಾಗಿದೆ.  2017ರ ನವೆಂಬರ್ 14ರವರೆಗೆ ಸುಮಾರು 2,09,878 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಶೇಕಡಾ 10.20 ಇಳುವರಿಯಲ್ಲಿ ಸುಮಾರು 2,03,156 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ.  ರೈತರ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ.  ಒಳ್ಳೆಯ ಗುಣಮಟ್ಟ ಮತ್ತು ಒಳ್ಳೆಯ ಇಳುವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯ ಯಶಸ್ಸಿನಲ್ಲಿ ಭಾಗಿಯಾಗಬೇಕು ಎಂದು ಸಿದ್ಧಾರ್ಥ ವಾಡೆನ್ನವರ ರೈತರಲ್ಲಿ ಮನವಿ ಮಾಡಿದ್ದಾರೆ.

Related posts: