RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ

ಗೋಕಾಕ:ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ 

ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ
ಸಾಧಿಕ ಹಲ್ಯಾಳ

ಬೆಳಗಾವಿ ಜಿಲ್ಲೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ಹಲವು ವರುಷಗಳಿಂದ ತಲೆ ಎತ್ತಿರುವ ರಮೇಶ ಕ್ರೀಡಾ ಸಂಕೀರ್ಣವು ಕೆಲವು ದಿನಗಳಿಂದ ಕ್ರೀಡಾ ಪ್ರೇಮಿಗಳಿಗೆ ನಿರಾಸಕ್ತಿಯನ್ನು ಮೂಡಿಸುತ್ತಿದೆ. ಇದಕ್ಕೆ ಕಾರಣ ಇಲ್ಲಿಯ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುಷ್ಠಾನ ಅಧಿಕಾರಿ ಎಮ್.ಪಿ. ಮರನೂರ ಅವರ ದಿವ್ಯ ನಿರ್ಲಕ್ಷ್ಯವೆಂದು ಅಲ್ಲಿ ಪ್ರತಿನಿತ್ಯ ದೈಹಿಕ ಕಸರತ್ತಿಗಾಗಿ ಹೋಗುವ ದೇಹದಾಡ್ರ್ಯ ಪಟುಗಳು ಹೇಳುತ್ತಿದ್ದಾರೆ.

ಸರಕಾರದ ಸಹಾಯ ಸೌಲತ್ತುಗಳನ್ನು ಪಡೆದುಕೊಂಡು ಜನ ಸಾಮಾನ್ಯರು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸರಕಾರಗಳು ಎಲ್ಲಿಲ್ಲದ ಹರಸಾಹಸ ಪಡುತ್ತಿದ್ದರು ಸಹ ಇಂತಹ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳಿಂದ ಸರಕಾರದ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ವಿಪಲಗೊಳ್ಳುತ್ತೇವೆ. ಇದಕ್ಕೆ ಜೀವಂತ ಉದಾಹರಣೆ ಗೋಕಾಕಿನ ಎಂ.ಪಿ ಮರನೂರ ಎಂದರೆ ಅತಿಶಯೋಕ್ತಿ ಯಾಗಲಾರದು ಇವರು ಬಂದಾಗಿನಿಂದಲು ಸಹ ಈ ಕ್ರೀಡಾ ಸಂಕೀರ್ಣದಲ್ಲಿ ಯಾವುದೇ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ವಾರಕ್ಕೆ ಒಂದು ಅಥವಾ ಅಪರೂಪಕ್ಕೆ ಎರಡು ಸಾರಿ ಬರುವ ಈ ಬೇಜವಾಬ್ದಾರಿಯುತ ಅಧಿಕಾರಿಯು ಸಂರ್ಕೀಣದಲ್ಲಿ ಏನು ನಡೆಯುತ್ತಿದೆ ಎಂಬುವದರ ಬಗ್ಗೆ ಮಾಹಿತಿಯನ್ನು ಇಡುವುದಿಲ್ಲ.

ಹಾಳಾಗಿರುವ ಜೀಮನ ಬೀಡಿಭಾಗಗಳು

ಇದರಿಂದ ಅಲ್ಲಿಗೆ ಬರುವ ದೇಹದಾಡ್ರ್ಯ ಪಟ್ಟುಗಳು ತುಂಬಾ ತೊಂದರೆಯನ್ನು ಪಡುತ್ತಿದ್ದಾರೆ ಇಲ್ಲಿ ಗೋಕಾಕ ಕ್ರೀಡಾ ಪ್ರೇಮಿಗಳು ತಮ್ಮ ದೇಹವನ್ನು ದಷ್ಟಪುಷ್ಠ ಮಾಡಿಕೊಳ್ಳುವ ಸಲುವಾಗಿ ಸಚಿವ ರಮೇಶ ಜಾರಕಿಹೊಳಿ ಪ್ರಯತ್ನದಿಂದ ಸುಸಜ್ಜಿತ ಮಲ್ಟಿ ಜಿಮ್‍ವಿದೆ ಇದನ್ನು ಬೆಳೆಸಿ ಗೋಕಾಕಿನ ಸಾಕಷ್ಟು ಕ್ರೀಡಾ ಸಕ್ತರು ತಮ್ಮ ದೇಹವನ್ನು ಸದೃಡಗೊಳಿಸಿಕೊಂಡು ಉತ್ತಮ ದೇಹದಾಡ್ರ್ಯ ಪಟ್ಟುಗಳಾಗಿ ತಾಲೂಕು, ಜಿಲ್ಲಾ, ರಾಜ್ಯಮಟ್ಟಗಳಲ್ಲಿ ತಮ್ಮ ಕಸರತ್ತುಗಳನ್ನು ತೋರಿ ಗೋಕಾಕಿನ ಹೆಸರನ್ನು ರಾಜ್ಯದಲ್ಲಿ ಬೆಳೆಗಿಸಿದ್ದಾರೆ. ಇದು ಪ್ರಶಂಸನೀಯ ವಿಷಯವೇನು ಸರಿಯೇ ಆದರೆ ಈ ಸುಸಜ್ಜಿತ ಇಡಲಾದ ಮಲ್ಟಿ ಜಿಮ್‍ನ ಎಲ್ಲಾ ವಸ್ತುಗಳು ಹಾಳಾಗಿದೆ.

ಜಿಮ್ ಮಾಡಲು ಬರುವವರಿಗೆ ಮ್ಯಾಟಿನ ವ್ಯವಸ್ಥೆ ಇಲ್ಲ ಇದ್ದ ಮ್ಯಾಟ ಹರಿದು ಹೋಗಿದೆ. ಸಾಮಗ್ರಿಗಳ ಬಿಡಿ ಬಾಗಗಳು ಹಾಳಾಗಿವೆ. ಯಾವ ಒಂದು ಮಶೀನವು ಇಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಇಲ್ಲಿದ್ದ ಹಲವು ವಸ್ತುಗಳು ಕಳವು ಆಗಿವೆ. ಇದನ್ನು ನೋಡಿಕೊಳ್ಳಲು ಇಲ್ಲಿ ಯಾರೊಬ್ಬ ನುರಿತ ತರಬೇತಿದಾರ ಇಲ್ಲ ಹಾಳಾದ ವಸ್ತುಗಳನ್ನು ದುರಸ್ತಿಗೊಳಿಸಲು ಅನುಭವ ಇರುವವರು ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಇಲ್ಲಿಯ ಎಲ್ಲ ವ್ಯವಸ್ಥೆ ಹಾಳಾಗಿ ಹೋಗಿದೆ. ಇರುವ ಇಬ್ಬರು ಸಹಾಯಕರು ಸಹ ಇಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಯೋಜನೆಯ ಲಾಭ ಪಡೆಯಲು ಬರುವ ಕ್ರೀಡಾ ಪ್ರೇಮಿಗಳು ಇಲ್ಲಿಯ ಅವ್ಯವಸ್ಥೆಯನ್ನು ನೋಡಿ ಸಂಕಷ್ಟವನ್ನು ಎದುರುಸುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಎಂ.ಪಿ.ಮರನೂರ ಅವರಿಗೆ ಮೌಖಿಕವಾಗಿ ಹೇಳಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಎಂದು ಕ್ರೀಡಾ ಪ್ರೇಮಿಗಳು ತಮ್ಮ ಅಳಲನ್ನು ಪತ್ರಿಕೆಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈಗಲಾದರು ಎಂ.ಪಿ.ಮರನೂರ ಎಚ್ಚೆತ್ತುಕೊಂಡ ಇಲ್ಲಿಯ ಅವವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿ ಪ್ರತಿನಿತ್ಯ ದೈಹಿಕ ಕಸರತ್ತಿಗಾಗಿ ಬರುವ ಕ್ರೀಡಾ ಸಕ್ತರಿಗೆ ದೇಹದಾಡ್ರ್ಯ ಪಟುಗಳಿಗೆ ನ್ಯಾಯದೊರಕಿಸಿಕೊಟ್ಟು ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಇದಕ್ಕೆ ಜಿಲ್ಲಾ ಉಪನಿರ್ದೇಶಕರಿಯಾದ ಶ್ರೀಮತಿ ಸುಜಿತ ನಲವಗಿ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕೆಷ್ಟೆ ?

ಬಸವರಾಜ ಖಾನಪ್ಪನವರ : ಅಧ್ಯಕ್ಷರು ಕರವೇ

“ಕಳೆದ ಹಲವು ದಿನಗಳಿಂದ ರಮೇಶ ಸಂಕೀರ್ಣದಲ್ಲಿ ಇರುವ ಜಿಮ್ ಹಾಳಾಗಿದೆ. ಇದನ್ನು ದುರಸ್ತಿಗೊಳಿಸಲು ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರವೇ ಸಂಕೀರ್ಣ ಬಂದ ಮಾಡಿ ಪ್ರತಿಭಟನೆ ಮಾಡಲಾಗುವುದು.”

Related posts: