RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ

ಗೋಕಾಕ:ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ 

ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ
ಗೋಕಾಕ ನ 14: ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಅಂಗನವಾಡಿ ಸಂಖ್ಯೆ 62 ರಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗೋಕಾಕ ತಾಲೂಕಾ ಘಟಕ ಅಧ್ಯಕ್ಷ ಶ್ರೀ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಗಳವಾರ ತಹಶೀಲ್ದಾರ ಕಚೇರಿ ಎದರು ಸೇರಿದ ಕಾರ್ಯಕರ್ತರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ತಹಶೀಲ್ದಾರ ಎಸ್.ಜಿ.ಮಾಳಗಿ ಮುಖಾಂತರ ಉಪನಿರ್ದೇಶಕರಿಗೆ ಮನವಿ ಅರ್ಪಿಸಿದರು.

ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಅಂಗನವಾಡಿ ಸಂಖ್ಯೆ 62 ರಲ್ಲಿ ಕಳೆದ 1 ವರ್ಷದಿಂದ ಕಾರ್ಯಕರ್ತೆ ಇಲ್ಲದೆ ಮಕ್ಕಳು ತುಂಬಾ ತೊಂದರೆಯನ್ನು ಪಡುತ್ತಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 70 ಕ್ಕೂ ಹೆಚ್ಚು ಮಕ್ಕಳು ದಾಖಲಾತಿಯನ್ನು ಪಡೆದಿದ್ದಾರೆ. ಆದರೆ ಕಾರ್ಯಕರ್ತೆ ಇಲ್ಲದೆ ಇವರ್ಯಾರು ಅಂಗನವಾಡಿ ಕೇಂದ್ರಕ್ಕೆ ಬರುತ್ತಿಲ್ಲ. ಪ್ರತಿನಿತ್ಯ ಮಕ್ಕಳನ್ನು ಕರೆಯಲು ಹೋಗುವ ಸಹಾಯಕಿಯರು ಸಹ ಕೇಂದ್ರದಲ್ಲಿ ಕಾರ್ಯಕರ್ತೆ ಇಲ್ಲದ್ದರಿಂದ ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಪ್ರತಿನಿತ್ಯ ಮಕ್ಕಳಿಗೆ ಅಂಗನವಾಡಿಯಲ್ಲಿ ಸಿಗುವ ಆಹಾರ ಪ್ರತಿ ತಿಂಗಳು ಗರ್ಭಿಣಿಯರಿಗೆ, ಬಾಣಂತಿಯರಿಗೆ ಸಿಗಬೇಕಾದ ಆಹಾರ ಧಾನ್ಯಗಳು ಸರಿಯಾಗಿ ಸಿಗುತ್ತಿಲ್ಲ. ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ ಆಹಾರ ಬೇರೆಯವರ ಪಾಲಾಗುತ್ತಿದೆ. ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಬಡಿಗವಾಡ ಗ್ರಾಮದಲ್ಲಿ ಉದ್ಭವಿಸಿರುವ ಈ ಸಮಸ್ಯೆಯನ್ನು ಸರಿಪಡಿಸಿ ಈ ಅಂಗನವಾಡಿ ಕೇಂದ್ರಕ್ಕೆ ಖಾಯಂ ಕಾರ್ಯಕರ್ತೆಯನ್ನು ನೇಮಿಸಬೇಕೆಂದು ಸಮಸ್ಥ ಸಾರ್ವಜನಿಕರ ಪರವಾಗಿ ಕರವೇ ಮನವಿಯಲ್ಲಿ ವಿನಂತಿಸಿ ಇದಕ್ಕೆ ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಕೇಂದ್ರವನ್ನು ಬಂದು ಮಾಡಿ ಪ್ರತಿಭಟಿಸಲಾಗುವದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಮಲ್ಲಪ್ಪಾ ಸಂಪಗಾರ, ರಮೇಶ ಕಮತಿ, ಗಣಪತಿ ಸಂಪಗಾರ, ಯಮನಪ್ಪಾ ವಗ್ಗನವರ, ವಿಠ್ಠಲ ಜಾಗನೂರ, ಹನೀಪಸಾಬ ಸನದಿ, ಶೆಟ್ಟೆಪ್ಪಾ ಗಾಡಿವಡ್ಡರ, ಅಶೋಕ ಬಂಡಿವಡ್ಡರ, ರಾಜು ಬಂಡಿವಡ್ಡರ, ಬಸು ತೇಲಿ, ಕೃಷ್ಣಾ ಕೆಂಪಣ್ಣಾ ಬಂಡಿವಡ್ಡರ, ಮಲ್ಲಪ್ಪಾ ತಲೆಪ್ಪಗೋಳ, ಕೆಂಪಣ್ಣಾ ಕಡಕೋಳ, ಅಜೀತ ಮಲ್ಲಾಪೂರೆ, ಫಕೀರಪ್ಪಾ ಗಣಾಚಾರಿ, ರವಿ ನಾಂವಿ, ಪರಶುರಾಮ ಗಾಡಿವಡ್ಡರ, ಬಸು ಗಾಡಿವಡ್ಡರ, ಮಲ್ಲಪ್ಪಾ ಹಂಜಿ, ಬಸು ಈರನಟ್ಟಿ, ಯಲ್ಲಾಲಿಂಗ ಕಪ್ಪಲಗುದ್ದಿ, ರಾಮ ಕುಡ್ಡೆಮ್ಮಿ, ರಮೇಶ ಕೆ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: