RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಬಸಗೌಡ ಪಾಟೀಲ

ಗೋಕಾಕ:ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಬಸಗೌಡ ಪಾಟೀಲ 

ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಬಸಗೌಡ ಪಾಟೀಲ
ಗೋಕಾಕ15: ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸನ್ಮಾನ್ಯಶ್ರೀ ಸತೀಶ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಸತೀಶ ಶುಗರ್ಸ್ ಅವಾರ್ಡ ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಕಲ್ಲೋಳಿಯ ಎಸ್.ಆರ್.ಇ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸಗೌಡ ಶಿವಗೌಡ ಪಾಟೀಲ ನುಡಿದರು.

ಸತೀಶ ಜಾರಕಿಹೊಳಿ ಪೌಂಡೇಶನದವರು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 17ನೇ ಸತೀಶ ಶುಗರ್ಸ್ ಅವಾಡ್ರ್ಸನ ಸಾಂಸ್ಕಂತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಬೇಕು. ಪಠ್ಯದ ಜೊತಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದರು.

ಇನ್ನೊರ್ವ ಅತಿಥಿ ಗೋಕಾಕಿನ ಎನ್.ಎಸ್.ಎಫ್. ವಸತಿ ಶಾಲೆಯ ಮುಖ್ಯೊಪಾಧ್ಯಾಯರಾದ ಶ್ರೀ ಎ.ಜಿ.ಕೋಳಿ ಮಾತನಾಡಿ ಸನ್ಮಾನ್ಯಶ್ರೀ ಸತೀಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ.

ಸತೀಶ ಶುಗರ್ಸ್ ಅವಾರ್ಡ ಎಂಬ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಸಂಘಟಿಸಿದ್ದು, ಪ್ರಸಕ್ತವರ್ಷ 17ನೇ ವರ್ಷವನ್ನು ಪೊರೈಸುತ್ತಿದೆ. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಈ ವಿನೋತನ ಕಾರ್ಯಕ್ರಮದ ಲಾಭ ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಎಸ್.ಆರ.ಇ. ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ಸಾತಪ್ಪ ಖಾನಾಪೂರ, ಮಲ್ಲಪ್ಪ ಕುರಬೇಟ, ಕಲ್ಲೋಳಿ ಸಿ.ಆರ್.ಸಿ. ಶ್ರೀ ಎಸ್.ಬಿ.ಕುಂಬಾರ, ಎನ್.ಆರ್.ಪಾಟೀಲ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಹಿರೇಮಠ, ಶ್ರೀ ಶಿವಗೌಡ ಬಸಗೌಡ ಪಾಟೀಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಆರ್.ವ್ಹಾಯ್. ಉಪ್ಪಾರ, ವಿವಿಧ ಶಾಲೆಯ ಮುಖ್ಯೋಪಾಧ್ಯಾಯರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮವನ್ನು ಬಿ.ಎಮ್.ಗೋರವರ ನಿರೂಪಿಸಿದರು, ಎ.ಆರ್.ಪಾಟೀಲ ಸ್ವಾಗತಿಸಿದರು, ಶ್ರೀಮತಿ ಜಿ.ಟಿ.ಗೋರಬಾಳ ವಂದಿಸಿದರು.

Related posts: