ಮೂಡಲಗಿ:ಪರಿವರ್ತನಾ ಯಾತ್ರೆಯು ರಾಜ್ಯದಲ್ಲಿ ನವ ಇತಿಹಾಸ ಸೃಷ್ಠಿಸಲಿದೆ : ಶಾಸಕ ಬಾಲಚಂದ್ರ
ಪರಿವರ್ತನಾ ಯಾತ್ರೆಯು ರಾಜ್ಯದಲ್ಲಿ ನವ ಇತಿಹಾಸ ಸೃಷ್ಠಿಸಲಿದೆ : ಶಾಸಕ ಬಾಲಚಂದ್ರ
ಮೂಡಲಗಿ ನ 16: ನವ ಕರ್ನಾಟಕದ ನಿರ್ಮಾಣಕ್ಕಾಗಿ ನ.2 ರಿಂದ ಆರಂಭವಾಗಿರುವ ಪರಿವರ್ತನಾ ಯಾತ್ರೆಯು ಶನಿವಾರ ದಿ.18 ರಂದು ಅರಬಾಂವಿ ಮತ ಕ್ಷೇತ್ರದ ಮೂಡಲಗಿ ಪಟ್ಟಣಕ್ಕೆ ಆಗಮಿಸಲಿದ್ದು, ರಾಜ್ಯದಲ್ಲಿಯೇ ಈ ಪರಿವರ್ತನಾ ಯಾತ್ರೆ ನವ ಇತಿಹಾಸ ಸೃಷ್ಠಿಸಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರ ಸಂಜೆ ಇಲ್ಲಿಯ ಎಸ್.ಎಸ್.ಆರ್ ಕಾಲೇಜು ಮೈದಾನದಲ್ಲಿ ಬೃಹತ ಶಾಮಿಯಾನ ವಿಕ್ಷೀಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಮೂಡಲಗಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಅರಭಾಂವಿ ವಿಧಾನ ಸಭಾ ಮತ ಕ್ಷೇತ್ರದ ಸುಮಾರು 50 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.
ರಾಮದುರ್ಗದಿಂದ ಮೂಡಲಗಿಗೆ ಆಗಮಿಸಲಿರುವ ಈ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಕೇಂದ್ರ ಸಚಿವರು, ರಾಜ್ಯ ನಾಯಕರಗಳು ಈ ಯಾತ್ರೆಯಲ್ಲಿ ಪಾಲ್ಗೊಳಲಿದ್ದಾರೆ. ಮೂಡಲಗಿಯಲ್ಲಿ ಹಿಂದೆಂದೂ ಸೇರದ ಜನ ಇದರಲ್ಲಿ ಭಾಗಿಯಾಗುವ ಮೂಲಕ ಬಿಜೆಪಿಗೆ ಹೊಸ ಚೈತನ್ಯ ತುಂಬಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯ ಹಾಗು ಕೇಂದ್ರ ನಾಯಕರುಗಳು ಆಗಮಿಸುತ್ತಿರುವದರಿಂದ ಮೂಡಲಗಿ ನವ ವಧುವಿನಂತೆ ಶೃಂಗಾರಗೊಳ್ಳುತ್ತಿದೆ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಕಾಲೇಜಿನ ಆವರಣದಲ್ಲಿ ಇದಕ್ಕಾಗಿ ಬೃಹತ್ತ ಶಾಮಿಯಾನ ನಿರ್ಮಿಸಲಾಗಿದು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಾಹನ ನಿಲ್ಲಗಡೆ ಹಾಗೂ ಊಟದ ವ್ಯವಸ್ಥೆಯನ್ನು ಪ್ರತೆಕವಾಗಿ ಮೂರು ಕಡೆ ಮಾಡಲಾಗಿದೆ. ಯಾತ್ರೆ ಸುಗಮವಾಗಿ ನಡೆಯಲು ಅಗತ್ಯ ವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮದ ರೂಪರೇಷಗಳನ್ನು ವಿವರಿಸಿದರು.
ಶನಿವಾರ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಪಟ್ಟಣದ ಗಣೇಶ ನಗರ(ಗೋಕಾಕ ಕ್ರಾಸ್)ದಿಂದ ಕಾರ್ಯಕ್ರಮ ನಡೆಯುವ ಸ್ಥಳದವರಿಗೆ ಸುಮಾರು ಐದು ಸಾವಿರ ಬೈಕ್‍ಗಳ ರ್ಯಾಲಿ ನಡೆಯಲಿದೆ ಎಂದು ಹೇಳಿದರು.
ಕಳೆದ 13 ವರ್ಷದಿಂದ ಅರಭಾಂವಿ ವಿಧಾನ ಸಭಾ ಮತಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದು, ಸರಕಾರದಿಂದ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಕ್ಷೇತ್ರದ ಸರ್ವತೋಮುಖ ಏಳ್ಗೇಗೆ ಬಳಕೆ ಮಾಡಲಾಗಿದೆ. ಕೈ ಬಿಟ್ಟಿದ ಮೂಡಲಗಿಯನ್ನು ಮರು ತಾಲೂಕು ಕೇಂದ್ರವನ್ನಾಗಿ ಘೋಷನೆ ಮಾಡಿರುದರಿಂದ ಮೂಡಲಗಿ ಹೊಸ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಶ್ರೀಪಾದಬೋಧ ಸ್ವಾಮಿಜಿ ಅವರ ಮಾರ್ಗದರ್ಶನದಲ್ಲಿ ಮೂಡಲಗಿ ತಾಲೂಕಿನ ಸರ್ವಾಂಗಿನ ಪ್ರಗತಿಗೆ ಶ್ರಮಿಸಲ್ಲಾಗುವದು. ಜನರ ಆಶಿರ್ವಾದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು. ಬಿ.ಎಸ್.ಯಡಿಯೂರಪ್ಪನ್ನವರು ಈ ರಾಜ್ಯದ ಮುಖ್ಯ ಮಂತ್ರಿಯಾಗಲಿದ್ದಾರೆ. ಮೂಡಲಗಿಯಲ್ಲಿ ನಡೆಯಲ್ಲಿರುವ ಯಾತ್ರೆಯಲ್ಲಿ ಅರಭಾಂವಿ ಮತ ಕ್ಷೇತ್ರದಲ್ಲಿ ಮುಂದೆ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಅವರಿಗೆ ಅರ್ಪಿಸಲ್ಲಾಗುವುದು. 224 ಕ್ಷೇತ್ರಗಳಗಿಂತ ಮೂಡಲಗಿಯಲ್ಲಿ ಶನಿವಾರದಂದು ಜರುಗಲಿರುವ ಯಾತ್ರೆÉ ಐತಿಹಾಸಿಕವಾಗಲಿದೆ ಯಡಿಯೂರಪ್ಪನವರ ಮನಸಿನಲ್ಲಿ ಈ ಯಾತ್ರೆ ಅಚಳಿಯದೆ ಉಳಿಯುವಂತೆ ಮಾಡುವದು ನಮ್ಮ ಆಶಯವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಬಿಜೆಪಿ ಪದಾಧಿಕಾರಿಗಳು ಹಾಗೂ ಮೂಡಲಗಿ ಮುಖಂಡರುಗಳು ಉಪಸ್ಥಿತರಿದ್ದರು.