RNI NO. KARKAN/2006/27779|Friday, November 22, 2024
You are here: Home » breaking news » ಖಾನಾಪುರ:ಬೀಡಿ ಗ್ರಾಮದಲ್ಲಿ ರೈತರಿಂದ ಬಿ.ಎಸ್.ವೈ ಗೆ ಗೇರಾವ್ , ಕಪ್ಪು ಬಾವುಟ ಪ್ರರ್ದಶನ

ಖಾನಾಪುರ:ಬೀಡಿ ಗ್ರಾಮದಲ್ಲಿ ರೈತರಿಂದ ಬಿ.ಎಸ್.ವೈ ಗೆ ಗೇರಾವ್ , ಕಪ್ಪು ಬಾವುಟ ಪ್ರರ್ದಶನ 

ಬೀಡಿ ಗ್ರಾಮದಲ್ಲಿ ರೈತರಿಂದ ಬಿ.ಎಸ್.ವೈ ಗೆ ಗೇರಾವ್ , ಕಪ್ಪು ಬಾವುಟ ಪ್ರರ್ದಶನ

ಖಾನಾಪುರ ನ 16 : ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲ, ಹಲವಾರು ಬಾರಿ ರೈತ ಸಂಘಟನೆಯ ವತಿಯಿಂದ ಕೇಂದ್ರ ಸರಕಾರಕ್ಕೆ ಮನವಿ ನೀಡಿದರೂ ಯಾವೂದೇ ರೀತಿಯ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಜೋತೆಗೆ ರಾಜ್ಯಾದಲ್ಲಿರುವ ಬಿಜೆಪಿ ನಾಯಕರು ರೈತರನ್ನು ನಿರ್ಲಕ್ಷಿಸಿಸುತ್ತಿದ್ದಾರೆ. ರೈತರ ಕಬ್ಬಿನ ಬೆಲೆ ನಿಗಧಿ ಮಾಡಿಲ್ಲ ಹಾಗೂ ಕಬ್ಬಿನ ಬಾಕಿ ಬಿಲ್ಲು ಕೊಡಿಸಲು ಮುಂದಾಗುತ್ತಿಲ್ಲ. ಇದಕ್ಕಾಗಿ ಎಲ್ಲ ರೈತ ಸಂಘದ ಕಾರ್ಯಕರ್ತರು ಕಪ್ಪು ಬಾವುಟದೊಂದಿಗೆ ಧಿಕ್ಕಾರ ಕುಗಿದರು.

ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಸಾಯಂಕಾಲ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿದ ಬಿ.ಎಸ್.ವೈ ಗೆ ಭಾರತೀಯ ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬಿ.ಎಸ್.ವೈ ಗೆ ಕಪ್ಪು ಬಾವುಟದೊಂದಿಗೆ ಗೇರಾವ ಹಾಕಿ ಬಿಜೆಪಿ ವಿರುದ್ಧ ಧಿಕ್ಕಾರ ಕುಗಿದರು.

ಹಸಿರು ಸೇನೆ ಸಂಚಾಲಕ ಅಶೋಕ ಯಮಕನಮರಡಿ ಮಾತನಾಡಿ ರಾಜ್ಯದಲ್ಲಿ ಸತತ 4ವರ್ಷಗಳಿಂದ ಬರಗಾಲ ಆವರಿಸಿರುವುದರಿಂದ ರೈತರ ಬಾಳು ಹದಗೆಟ್ಟುಹೋಗಿದೆ, ಹೀಗಾಗಿ ರೈತರು ಮಾಡಿದ ಸಾಲ ತಿರಿಸಲು ಆಗದೇ ಸುಮಾರು 3000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುತ್ತಾರೆ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ರಾಜ್ಯದ ಬಿಜೆಪಿ ಘಟಕ ಕೇಂದ್ರ ಸರಕಾರಕ್ಕೆ ಆಗ್ರಹಿಸಬೇಕೆಂದು ರಸ್ತೆ ತಡೆದು ಕಪ್ಪು ಬಾವುಟ ತೋರಿಸಿ ಬಿಜೆಪಿ ಪಕ್ಷಕ್ಕೆ ಧಿಕ್ಕಾರ ಕುಗಿದರು.

ಈ ಸಂಧರ್ಭದಲ್ಲಿ ಗುರುಲಿಂಗಯ್ಯಾ ಪೂಜಾರ, ವಸಂತ ತಿಪ್ಪನ್ನವರ, ಯಲ್ಲಪ್ಪಾ ಚನ್ನಾಪೂರ, ನಾಗಪ್ಪಾ ಅಂಬಡಗಟ್ಟಿ, ಕೃಷ್ಣಾ ಹಲಗೇಕರ,ಕಲ್ಮೇಶ ಕರವಿನಕೊಪ್ಪ, ಮಹಾದೇವ ಸಾಗರೇಕರ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ರೈತರು ಹಾಜರಿದ್ದರು.

Related posts: