ರಾಯಬಾಗ:ನಿಲ್ಲದ ವೈದ್ಯರ ಮುಷ್ಕರ 45 ದಿನದ ಶಿಶುವಿನ ಸಾವು : ಮುಗಳಖೋಡದಲ್ಲಿ ಘಟನೆ
ನಿಲ್ಲದ ವೈದ್ಯರ ಮುಷ್ಕರ 45 ದಿನದ ಶಿಶುವಿನ ಸಾವು : ಮುಗಳಖೋಡದಲ್ಲಿ ಘಟನೆ
ರಾಯಬಾಗ ನ 17: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಖಾಸಗಿ ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ ಸಾವಿನ ಸರಣಿ ಮುಂದುವರಿದಿದೆ ಸಕಾಲಕ್ಕೆ ಚಿಕ್ಸಿತೆ ದೊರೆಯದ ಕಾರಣ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ 45 ದಿನದ ಶಿಶು ಸಾವನ್ನಪ್ಪಿದ್ದ ಘಟನೆ ನಡೆದಿದೆ
ಸುರೇಶ್ ವಡ್ರಾಳೆ ಹಾಗೂ ಶ್ರೀದೇವಿ ವಡ್ರಾಳೆ ದಂಪತಿಯ 45 ದಿನದ ಗಂಡು ಶಿಶು ಸಾವನ್ನಪ್ಪಿದೆ. ಪೊಲೀಯೋ ಹನಿ ಹಾಕಿದ ನಂತರ ವಿಪರೀತ ಜ್ವರದಿಂದ ಬಳಲಿದ್ದ ಶಿಶುವಿಗೆ ಮುಗಳಖೋಡದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಕ್ಕಿಲ್ಲವೆಂದು ಆರೋಪಿಸಲಾಗಿದೆ.
ಚಿಕಿತ್ಸೆಗಾಗಿ ಪೋಷಕರು ಹಾರೂಗೇರಿ ಹಾಗೂ ಮುಗಳಖೋಡ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಶಿಶು ಸಾವನ್ನಪ್ಪಿದೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ