RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ

ಮೂಡಲಗಿ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ 

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ : ಬಿ ಎಸ್ ಯಡಿಯೂರಪ್ಪ ಅವರು ಆರೋಪ

 

ಮೂಡಲಗಿ ನ 18 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ರಾಜ್ಯದ ಜನರನ್ನು ವಂಚಿಸಿ ಲೂಟಿ ಮಾಡಿದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆರೋಪಿಸಿದರು.
ಇಲ್ಲಿಯ ಎಸ್‍ಎಸ್‍ಆರ್ ಕಾಲೇಜಿನ ಮೈದಾನದಲ್ಲಿ ಶನಿವಾರ ಸಂಜೆ ನಡೆದ ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಬೃಷ್ಠ ಮುಖ್ಯ ಮಂತ್ರಿಯಾಗಿದ್ದಾನೆ. ಅಧಿಕಾರದ ಅಹಂಕಾರದಲ್ಲಿ ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾನೆ.ಸರಕಾರದ ಆಸ್ತಿಗಳನ್ನು ಒತ್ತೆ ಇಟ್ಟು ಸಾವಿರ ಕೋಟಿ ರೂಗಳ ಸಾಲ ಪಡೆದುಕೊಂಡು ಸರಕಾರ ದೀವಾಳಿ ಹಂತಕ್ಕೆ ತಂದು ನಿಲ್ಲಿಸಿದ ಅಪಖ್ಯಾತಿಗೆ ಸಾಕ್ಷಿಯಾದ ಮುಖ್ಯಮಂತ್ರಿಯಾಗಿದ್ಧಾನೆ.ಇಂತಹ ಲಜ್ಜೆಗೆಟ್ಟ ಸರಕಾರವನ್ನು ಮನೆಗೆ ಕಳುಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿಕೊಂಡರು.
ಎಲ್ಲ ವರ್ಗಗಳ ಅಭಿವೃದ್ಧಿ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ಜನತೆಗೆ ದ್ರೋಹ ಮಾಡಿದೆ.ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ಜನಾಂಗಕ್ಕೆ ಅನ್ಯಾಯವೆಸಗಿದೆ.ನಾನು ಮುಖ್ಯ ಮಂತ್ರಿ ಇದ್ದಾಗ ಕಾಗಿನೆಲೆ ಅಭಿವೃದ್ಧಿಗೆ 40 ಕೋಟಿ, ಕನಕ ಭವನಕ್ಕೆ ,ಮುಸ್ಮಿಂ ಸಮುಧಾಯದ ಹಜ ಭವನಕ್ಕೆ 40 ಕೋಟಿ, ಶಾದಿಮಹಲ ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣಕೋಸ್ಕರ ಸಾಕಷ್ಟು ಜನ ಪರ ಯೋಜನೆಗಳನ್ನು ಹಮ್ಮಿಕೊಂಡಿದ್ದಾಗಿ ಅವರು ವಿವರಿಸಿದರು.
ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳು ರೈತರ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಕೃಷಿ ಸಾಲ ಮನ್ನಾ ಮಾಡಿದೆ. ಆದರೆ ಸಿದ್ದರಾಮಯ್ಯ ಕೇವಲ ಸಹಕಾರಿ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಕೇವಲ 50 ಸಾವಿರ ಮನ್ನಾಮಾಡಿ ಕೈತೊಳೆದುಕೊಂಡು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ ಎಂದು ಆರೋಪಿಸಿದ ಅವರು,ಜನಗಳ ಆಶೀರ್ವಾದದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಕೃಷಿ ಸಾಲ ಸಹಿತ ಕರ್ನಾಟಕದ ಸಮಗ್ರ ವಿಕಾಸಕ್ಕಾಗಿ ಶ್ರಮಿಸಲಾಗುವದೆಂದು ಅವರು ಹೇಳಿದರು.

ಬಾಲಚಂದ್ರರನ್ನು ಅಭಿನಂದಿಸಿದ ಬಿಎಸ್‍ವೈ:

ಇದುವರೆಗೆ ನಡೆದ ಪರವರ್ತನಾ ಯಾತ್ರೆಗಳಲ್ಲಿ ಮೂಡಲಗಿಯಲ್ಲಿ ನಡೆದ ಯಾತ್ರೆಯಲ್ಲಿ ಬಹುದೊಡ್ಡ ಜನ ಸಾಗರವೇ ಸೇರಿರುವದು ಬಾಲಚಂದ್ರ ಅವರ ಸಂಘಟನಾ ಚಾತುರ್ಯವನ್ನು ಎತ್ತಿ ತೋರಿಸಿದೆ.ಇದೊಂದು ರಾಜ್ಯದಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಠಿಸಿದೆ. ಇಂತಹ ಜನಸಾಗರವನ್ನು ಎಲ್ಲಿಯೂ ನೋಡಿಲ್ಲ ಎಂದು ಹರ್ಷ ವ್ಯಕ್ತ ಪಡಿಸಿದರು.ಮೂಡಲಗಿ ತಾಲೂಕನ್ನು ಮರು ಘೋಷಣೆ ಮಾಡಿರುವದರಲ್ಲಿ ಬಾಲಚಂದ್ರ ಅವರ ಪ್ರಭಾವ ಎಷ್ಟಿದೆ ಎನ್ನುವದು ಎತ್ತಿತೋರಿಸಿದೆ. ಅದಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ.ಕಾಂಗ್ರೇಸ್ ಸರಕಾರದಿಂದ ಮೂಡಲಗಿ ತಾಲೂಕು ಅಭಿವೃದ್ಧಿಯಾಗುವುದಿಲ್ಲಿ ನಮ್ಮ ಸರಕಾರ ಬಂದ ಮೇಲೆ ಮೂಡಲಗಿ ಹೊಸ ತಾಲೂಕಿನ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಳಾಗುವದು ಜೊತೆಗೆ ಬಾಲಚಂದ್ರ ಅವರ ಕನಸಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬದ್ದನಿರುವಾಗಿ ತಿಳಿಸಿದರು.

ಎಸ್‍ಎಸ್‍ಆರ್ ಕಾಲೇಜಿನ ಮೈದಾನದಲ್ಲಿ ಶನಿವಾರ ಸಂಜೆ ನಡೆದ ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಮಾತನಾಡಿದರು.

ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಸಚಿವ ಅನಂತಕುಮಾರ ಮಾತನಾಡಿ, ಕೇಂದ್ರದಲ್ಲಿ ಮೋದಿ ಸರಕಾರ ಟಾಪ್ ಗೇರದಲ್ಲಿದ್ದು ಆದರೆ ರಾಜ್ಯದಲ್ಲಿ ಸಿ.ಎಮ್ ಸಿದ್ರಾಮಯ್ಯ ಸರ್ಕಾರ ರೀವರ್ಸ್ ಗೇರನಲ್ಲಿದೆ. ಅಭಿವೃದ್ದಿ ಹಿನ್ನೇಲೆಯಲ್ಲಿ ಕೇಂದ್ರದಲ್ಲಿರುವಂತೆ ರಾಜ್ಯದಲ್ಲಿಯು ಅಭಿವೃದ್ದಿ ಪರ್ವಕ್ಕಾಗಿ ಡಬಲ್ಲ್ ಇಂಜಿನ್‍ಗಾಗಿ ಬಿ.ಜೆ.ಪಿ ಯನ್ನು ಆಶಿರ್ವದಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹಾಗೂ ಬಿ.ಜೆ.ಪಿಯ ಕೈ ಬಲಪಡಿಸಲು ಅರಭಾಂವಿ ಕ್ಷೇತ್ರದಲ್ಲಿಯು ಕೂಡಾ ಬಾಲಚಂದ್ರ ಜಾರಕಿಹೋಳಿಯವರನ್ನು ಟಾಪ್ ಗೇರಿಗೆ ತರಲು ಶ್ರಮಿಸುವಂತೆ ಕರೆ ನೀಡಿದರು. ಬಾಲಚಂದ್ರ ಅವರನ್ನು ಸಹೊದರ ಎಂದೆ ಸಂಭೋದಿಸಿ ಮಾತನಾಡಿದ ಅವರು ಮೂಡಲಗಿಯಲ್ಲಿ ರಾಜ್ಯದಲ್ಲಿ ನಡೆದ ರ್ಯಾಲಿಗಳಲ್ಲಿ ಇದೊಂದು ವಿರಾಟ ರ್ಯಾಲಿಯಾಗಿದೆ ಎಂದು ಬಣಿಸಿದರು. ನೀರಾವರಿ ಯೋಜನೆ ಅನುಷ್ಠಾನಕ್ಕೆ ಎರಡು ವಾರದೊಳಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದರು. ಪ್ರಧಾನಿ ನರೇಂದ್ರ ಮೋದಿ, ಜಲ ಸಂಪನ್ಮೂಲ ಸಚಿವ ನೀತಿನ ಗಡಕ್ಕರಿ ಅವರನ್ನು ಭೇಟ್ಟಿ ಮಾಡಿಸಿ ಅರಭಾಂವಿ ಹಾಗೂ ರಾಮದುರ್ಗ ಮತ ಕ್ಷೇತ್ರಗಳ ನೀರಾವರಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮೂಡಲಗಿ ಹೊಸ ತಾಲೂಕಾಗಲು ಬೆಂಗಳೂರಿನಲ್ಲಿ 22 ದಿನ ಬೀಡು ಬಿಟ್ಟು ಸರಕಾರದ ಮೇಲೆ ಒತ್ತಡ ಹೇರಿದಾಗ ಮಾತ್ರ ಮೂಡಲಗಿ ನೂತನ ತಾಲೂಕಾಗಲು ಸಾಧ್ಯವಾಯಿತು ಹೊರತು ಇನ್ನೂ ಒಂದು ವರ್ಷ ಹೋರಾಟಗಾರರು ಹೋರಾಟ ನಡೆಸಿದರೂ ತಾಲೂಕಾಗುವದು ಕನಸಿನ ಮಾತಾಗಿತ್ತು. ವಿರೋಧಿಗಳು ಎಷ್ಟೇ ವದಂತಿಗಳನ್ನು ಹಬ್ಬಿಸಿದರು ಕೂಡಾ ಸದ್ಯ ಜರುಗುವ ಚುನಾವಣೆಯಲ್ಲಿ ಕ್ಷೇತ್ರದ ಜನತೆಯ ಆಶಿರ್ವಾದದಿಂದ ಲಕ್ಷ್ಯಕ್ಕೂ ಅಧಿಕ ಮತಗಳನ್ನು ಪಡೆದು ಆಯ್ಕೆಯಾಗುವದು ಶತ ಸಿಧ್ಧ. ಮೂಡಲಗಿ ಹೊಸ ತಾಲೂಕು ಹಾಗೂ ಅರಭಾಂವಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಬಿ.ಎಸ್ ಯಡಿಯೂರಪ್ಪನವರಿಗೆ 31 ಹೊಸ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿನಗಿ, ಸಂಸದರಾದ ಶೋಭಾ ಕರಂದ್ಲಾಚೆ, ಸುರೇಶ ಅಂಗಡಿ, ಶಾಸಕರಾದ ಉಮೇಶ ಕತ್ತಿ, ಡಾ: ವಿಶ್ವನಾಥ ಪಾಟೀಲ, ದುರ್ಯೋಧನ ಐಹೋಳಿ, ಅಶ್ವಥ ನಾರಾಯಣ, ಮಾಜಿ ಶಾಸಕ ಎಮ್.ವ್ಹಿ.ನಾಗರಾಜ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಜಗದೀಶ ಹಿರೇಮನ್ನಿ, ಭಾರತಿ ಮಗದುಮ್ ಸೇರಿದಂತೆ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು ವೇದಿಕೆಯಲ್ಲಿದರು.
ಇದಕ್ಕೂ ಮುನ್ನ ಗೋಕಾಕ ಕ್ರಾಸ್ ದಿಂದ ವೇದಿಕೆಯವರೆಗೆ ಬೃಹತ್ ಕಾರ್ಯಕರ್ತರ ಬೈಕ್ ರ್ಯಾಲಿ ನಡೆಯಿತು.

ಪರಿವರ್ತನಾ ರ್ಯಾಲಿಯಲ್ಲಿ ಐವತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

 

Related posts: