RNI NO. KARKAN/2006/27779|Monday, December 23, 2024
You are here: Home » breaking news » ಖಾನಾಪುರ:ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಖಾನಾಪುರ:ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ 

ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಖಾನಾಪುರ ನ 19: ಭಾಷಾ ಸಾಮರಸ್ಯವನ್ನು ಬೆಳೆಸಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನಲ್ಲಿ ಸತೀಶ ಪ್ರತಿಭಾ ಪುರಸ್ಕಾರ ಹಮ್ಮಿಕೋಳಲಾಗಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು .

ಅವರು ಸತೀಶ ಜಾರಕಿಹೊಳಿ ಪೌಂಡೇಶನ ನಗರದ ಸರ್ವೋದಯ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ
3ನೇ ಸತೀಶ ಪ್ರತಿಭಾ ಪುರಸ್ಕಾರ ಅಂತಿಮ ಹಂತದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಈ ಭಾಗದ ವಿಧ್ಯಾರ್ಥಿಗಳು ರಾಜ್ಯ , ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗಿದೆ ಇದಕ್ಕೆ ಕಳೆದ ಮೂರು ವರ್ಷದಿಂದ ನಡೆಯುತ್ತಿರುವ ಈ ಕಾರ್ಯಕ್ರಮವೇ ಸಾಕ್ಷೀ ಬಾಲಗಂಗಾಧರ ತಿಲಕ ಅವರು ತಮ್ಮ ವಿಚಾರಗಳನ್ನು ಸಮಾಜಕ್ಕೆ ತಿಳಿಸಲು ಮಹಾರಾಷ್ಟ್ರದ ಪೂಣೆಯಲ್ಲಿ ಗಣಪತಿ ಕುಡಿಸುತ್ತಿದ್ದರು ಅದರಂತೆ ನಮ್ಮ ವಿಚಾರಗಳನ್ನು ಜನರಿಗೆ ತಿಳಿಸಲು ಖಾನಾಪುರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ನಡೆಸಲಾಗುತ್ತಿದೆ ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸತೀಶ ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಸರ್ವೋದಯ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು

ವೇದಿಕೆಯಲ್ಲಿ ರಾಹುಲ್ ಜಾರಕಿಹೊಳಿ , ಕಾರ್ಯಕ್ರಮದ ಸಂಘಟಕರಾದ ಎಸ್.ಎ. ರಾಮಗಾನಟ್ಟಿ , ರಿಯಾಜ ಜೌಗಲಾ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶಿಕ್ಷಣ ಎ.ಜಿ.ಕೋಳಿ ನಿರೂಪಿಸಿದರು ವಂದಿಸಿದರು

Related posts: