ಗೋಕಾಕ:ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ
ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ
ಗೋಕಾಕ ನ 19: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹಿಸಿ, ದಿ. 22 ರಂದು ತಹಶೀಲದಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಪ್ಪಾರ ಸಮಾಜದ ಗ್ರಾಮೀಣ ಘಟಕದ ಅಧ್ಯಕ್ಷ ರಾಮಣ್ಣ ತೋಳಿ ಹಾಗೂ ನಗರ ಘಟಕದ ಅಧ್ಯಕ್ಷ ರಾಮಸಿದ್ಧ ಖಾನಪ್ಪನವರ ತಿಳಿಸಿದ್ದಾರೆ.
ರವಿವಾರದಂದು ನಗರದ ಪ್ರವಾಸಿ ಮಂದಿರದಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಗೋಕಾಕ ತಾಲೂಕಿನ ಎಲ್ಲ ಉಪ್ಪಾರ ಸಮಾಜದ ಬಾಂಧವರು ದಿ. 22 ರಂದು ಮುಂಜಾನೆ 10 ಗಂಟೆಗೆ ನಗರದ ಎಪಿಎಂಸಿ ಆವರಣದಲ್ಲಿ ಸೇರಿ ನಂತರ 11 ಗಂಟೆಗೆ ಗೋಕಾಕ ತಹಶೀಲ್ದಾರ ಅವರಿಗೆ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ನಂತರ ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ತಾಲೂಕಿನ ಉಪ್ಪಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
2006ರಲ್ಲಿ ಹುಬ್ಬಳ್ಳಿಯಲ್ಲಿ ಉಪ್ಪಾರರ ರಾಜ್ಯಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸುವ ಭರವಸೆ ನೀಡಿದ್ದರು ಆದರೆ ಆ ಭರವಸೆ ಈಡೇರಿಲ್ಲ. ಮತ್ತು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಹಾಗೂ ಹೊಸದುರ್ಗದ ರಾಜ್ಯ ಮಟ್ಟದ ಉಪ್ಪಾರ ಸಮಾವೇಶದಲ್ಲಿ ಸಮಾಜವನ್ನು ಎಸ್ಸಿಗೆ ಸೇರ್ಪಡಿಸುವ ಭರವಸೆ ನೀಡಿದ್ದರು ಆದರೆ ಇಲ್ಲಿಯವರಿಗೆ ಈ ಭರವಸೆ ಇನ್ನು ಈಡೇರಿಲ್ಲ ಹಾಗಾಗಿ ಉಪ್ಪಾರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸುತ್ತಾ ಬಂದಿವೆ. ಹಾಗಾಗಿ ಉಪ್ಪಾರ ಸಮಾಜ ಬಾಂಧವರು ಒಗ್ಗಟ್ಟಾಗಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗುವರೆಗೆ ಹೋರಾಟದ ಅನಿವಾರ್ಯತೆ ಇದೆ, ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಮ್.ಹತ್ತಿಕಟಗಿ, ಅಡಿವೆಪ್ಪಾ ಕಿತ್ತೂರು, ಪರಸಪ್ಪಾ ಚೂನನ್ನವರ, ಕಲ್ಲೋಳೆಪ್ಪಾ ತಹಶೀಲ್ದಾರ, ಉದ್ದಪ್ಪ ಹಳ್ಳೂರ,ಅಡಿವೆಪ್ಪ ಮಜ್ಜಗಿ ಇದ್ದರು.