ಮೂಡಲಗಿ: ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ
ಎಸ್ಎಸ್ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ : ಹ್ಯಾಟ್ರಿಕ್ ಸಾಧನೆ ಗೈದ ಮೂಡಲಗಿ ಶೈಕ್ಷಣಿಕ ವಲಯ
ಮೂಡಲಗಿ ಮೇ 12: ಪರಿಶ್ರಮ ಫಲವಾಗಿ ಸತತವಾಗಿ ಮೂರನೇ ಬಾರಿ ರಾಜ್ಯದಲ್ಲಿಯೇ ಮೂಡಲಗಿ ವಲಯ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ತಿಳಿಸಿದರು.
ರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯು ಶುಕ್ರವಾರ ಫಲಿತಾಂಶ ಪ್ರಟಕಗೊಳಿಸಿದ ನಂತರ ಬಿ.ಇ.ಓ ಕಚೇರಿಯಲ್ಲಿ ಮಾತನಾಡಿ, ಮೂಡಲಗಿ ವಲಯವು ನಿರಂತರವಾಗಿ ರಾಜ್ಯದಲ್ಲಿರುವ 204 ಶೈಕ್ಷಣಿಕ ವಲಯಗಳಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದು.
ಪ್ರಸಕ್ತ ಸಾಲಿನಲ್ಲಿ ಒಟ್ಟು 5190 ವಿದ್ಯಾರ್ಥಿಗಳಲ್ಲಿ 2671 ಬಾಲಕರು, 2216 ಬಾಲಕಿಯರು ಉತ್ತೀರ್ಣಗೊಂಡಿದ್ದು, ಶೇಕಡಾ 94 ರಷ್ಟು ಫಲಿತಾಂಶ ಪಡೆದುಕೊಂಡಿದೆ.ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಫಲವಾಗಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿರು.
ಅನಾಥ ವಿದ್ಯಾರ್ಥಿ ರವಿ ಕೊಂಗಾಲಿ 616 ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾನೆ. ಈತನಿಗೆ ಕಾರ್ಕಳದ ಅಜಯಕಾರ ಪದ್ಮಗೋಪಾಲ ಶಿಕ್ಷಣ ಸಂಸ್ಥೆಯ ಜ್ಞಾನ ಸುಧಾ ಕಾಲೇಜಿನ ಅಧ್ಯಕ್ಷ ಸುಧಾಕರ ಶೆಟ್ಟಿ 2 ವರ್ಷಗಳ ಉಚಿತ ಶಿಕ್ಷಣ ಕೊಡುವದಾಗಿ ಭರವಸೆಯನ್ನು ನೀಡಿದ್ದಾರೆ.
ಫಲಿತಾಂಶದ ಕುರಿತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಚಿಕ್ಕೋಡಿ ಉಪನಿರ್ದೇಶಕ ಗಜಾನನ ಮನ್ನಿಕೇರಿ ವಲಯದ ಸಾಧನೆಯನ್ನು ಹಾರೈಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎ ನಾಡಗೌಡ, ಕೆ.ಬಿ ಮೋರೆ, ಬಿ.ಆರ್.ಪಿ ಕೆ.ಎಲ್.ಮೀಶಿ, ಸಿ.ಆರ್.ಪಿ ಸಿ.ಎಸ್ ಮೊಹಿತೆ, ಸಂಪನ್ಮೂಲ ಶಿಕ್ಷಕ ಎಸ್.ಸಿ ಅರಗಿ, ಎಸ್.ಎಸ್ ಕಮತಿ ಇತರರು ಉಪಸ್ಥಿತರಿದ್ದರು.