ಗೋಕಾಕ:ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹ : ತಾಲೂಕಾ ಉಪ್ಪಾರ ಸಂಘದಿಂದ ಮನವಿ
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹ : ತಾಲೂಕಾ ಉಪ್ಪಾರ ಸಂಘದಿಂದ ಮನವಿ
ಗೋಕಾಕ ನ 22: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹಿಸಿ, ತಹಶೀಲದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಗೋಕಾಕ ತಾಲೂಕಾ ಉಪ್ಪಾರ ಸಂಘದ ನೇತ್ರತ್ವದಲ್ಲಿ ಉಪ್ಪಾರ ಸಮಾಜ ಬಾಂಧವರು ಮನವಿಯನ್ನು ಅರ್ಪಿಸಿದರು.
ಬುಧವಾರದಂದು ನಗರದ ಮಿನಿ ವಿಧಾನ ಸೌಧದಲ್ಲಿ ಸೇರಿದ ನೂರಾರು ಸಮಾಜ ಬಾಂಧವರು, ಪ್ರತಿಭಟನೆ ನಡೆಸಿ, ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಉಪ್ಪಾರ ಸಮಾಜವು ಆದಿಕಾಲದಿಂದಲೂ ಹಿಂದುಳಿದ ಸಮಾಜವಾಗಿದ್ದು, ರಾಜ್ಯದ ವಿವಿಧೆಡೆ ಹಲವಾರು ವರ್ಷಗಳಿಂದ ಸಮಾವೇಶ ಸಮಾರಂಭವನ್ನು ಏರ್ಪಡಿಸಿ, ರಾಜ್ಯ ಸರ್ಕಾರಗಳಿಗೆ ಮನವಿಯನ್ನು ಸಲ್ಲಿಸಿತ್ತಾ ಬಂದಿದ್ದರೂ ಇನ್ನು ವರೆಗೆ ಸಮಾಜಕ್ಕೆ ಯಾವುದೇ ಪ್ರಯೋಜನವಾಗಿರುವದಿಲ್ಲ.
2006ರಲ್ಲಿ ಹುಬ್ಬಳ್ಳಿಯಲ್ಲಿ ಉಪ್ಪಾರರ ರಾಜ್ಯಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸುವ ಭರವಸೆ ನೀಡಿದ್ದರು ಆದರೆ ಆ ಭರವಸೆ ಈಡೇರಿಲ್ಲ. ಮತ್ತು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಹಾಗೂ ಹೊಸದುರ್ಗದ ರಾಜ್ಯ ಮಟ್ಟದ ಉಪ್ಪಾರ ಸಮಾವೇಶದಲ್ಲಿ ಸಮಾಜವನ್ನು ಎಸ್ಸಿಗೆ ಸೇರ್ಪಡಿಸುವ ಭರವಸೆ ನೀಡಿದ್ದರು ಆದರೆ ಇಲ್ಲಿಯವರಿಗೆ ಈ ಭರವಸೆ ಇನ್ನು ಈಡೇರಿಲ್ಲ ಹಾಗಾಗಿ ಉಪ್ಪಾರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸುತ್ತಾ ಬಂದಿವೆ. ಉಪ್ಪಾರ ಸಮಾಜವು ಭೋವಿ ಸಮಾಜದ ಸ್ಥಿತಿಯಲ್ಲಿಯೇ ಇದೆ ಆದರೆ ಭೋವಿ ಸಮಾಜವನ್ನು ಎಸ್‍ಸಿ ಮೀಸಲಾತಿ ಪಟ್ಟಿಯಲ್ಲಿದ್ದು ಇದ್ದರಿಂದಾಗಿ ಸರ್ಕಾರಗಳು ಉಪ್ಪಾರ ಸಮಾಜದ ಮೇಲೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ.
ಉಪ್ಪಾರ ಸಮಾಜದ ಉಪಜಾತಿಗಳಾದ ಕೂಸರು, ಮಂಡಾಲರು, ಭಟದಾ ಮತ್ತು ಮಹರಾ ಜಾತಿಗಳನ್ನು ಕಾರವಾರ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು ಈಗಾಗಲೇ ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಉಪ್ಪಾರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಿಲ್ಲ, ಸಮಾಜದ ಅಭಿವೃದ್ದಿಯ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿರುವ ಉಪ್ಪಾರ ಸಮಾಜಕ್ಕೆ ಪವರ್ಗ-1ರ ಮೀಸಲಾತಿ ಸಾಕಾಗುವದಿಲ್ಲ, ಉಪ್ಪಾರ ಸಮಾಜದ ಅಭಿವೃದ್ದಿಗಾಗಿ ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ರಾಮಣ್ಣ ತೋಳಿ, ನಗರ ಘಟಕದ ಅಧ್ಯಕ್ಷ ರಾಮಸಿದ್ಧ ಖಾನಪ್ಪನವರ, ಬಿ.ಆರ್.ಕೊಪ್ಪ, ಎಸ್.ಎಮ್.ಹತ್ತಿಕಟಗಿ, ಅಡಿವೆಪ್ಪಾ ಕಿತ್ತೂರು, ಪರಸಪ್ಪಾ ಚೂನನ್ನವರ, ಬಿ.ಬಿ.ಹಂದಿಗುಂದ, ಎಲ್.ಎನ್. ಬೂದಿಗೊಪ್ಪ, ಕಲ್ಲೋಳೆಪ್ಪಾ ತಹಶೀಲ್ದಾರ, ಸುರೇಶ ಬಡೆಪ್ಪಗೋಳ, ಎನ್.ಎಫ್.ಹುಳ್ಳಿ, ಎಮ್.ಎ,ತಹಶೀಲದಾರ, ವಾಸುದೇವ ಸವತಿಕಾಯಿ, ಭರಮಣ್ಣ ಉಪ್ಪಾರ, ಮಲ್ಲಿಕಾರ್ಜುನ ಚೌಕಶಿ, ಕುಶಾಲ ಗುಡೇನ್ನವರ, ಕೆಂಚಪ್ಪ ಸಂಪಗಾಂವಿ, ಚನ್ನಪ್ಪ ವಗ್ಗನ್ನವರ, ಲಕ್ಷ್ಮಣ ಬಬಲಿ, ಯಲ್ಲಪ್ಪ ಸುಳ್ಳನವರ, ಜಿ.ಡಿ.ತಾಶೀಲದಾರ, ಹಣಮಂತ ದುರ್ಗನ್ನವರ, ಉದ್ದಪ್ಪ ಹಳ್ಳೂರ,ಅಡಿವೆಪ್ಪ ಮಜ್ಜಗಿ ಜಗದೀಶ ಶಿಂಗಳಾಪೂರ, ಲಕ್ಕಪ್ಪ ತಹಶೀಲದಾರ, ಮುರಳಿಧರ ಮನ್ನಿಕೇರಿ, ಮಲ್ಲಪ್ಪ ಮದಿಹಳ್ಳಿ, ನಿಂಗಪ್ಪ ರಂಕನಕೊಪ್ಪ, ಆನಂದ ಹಂಜಿ, ಶಂಬುಲಿಂಗ ಮುಕ್ಕಣ್ಣವರ ಸೇರಿದಂತೆ ಅನೇಕರು ಇದ್ದರು.