RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರೈತರ ಅಭಿವೃದ್ದಿಯಲ್ಲಿ ಸಹಕಾರಿ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ : ನೀಲಕಂಠ ಕಪ್ಪಲಗುದ್ದಿ

ಗೋಕಾಕ:ರೈತರ ಅಭಿವೃದ್ದಿಯಲ್ಲಿ ಸಹಕಾರಿ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ : ನೀಲಕಂಠ ಕಪ್ಪಲಗುದ್ದಿ 

ರೈತರ ಅಭಿವೃದ್ದಿಯಲ್ಲಿ ಸಹಕಾರಿ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ : ನೀಲಕಂಠ ಕಪ್ಪಲಗುದ್ದಿ

ಗೋಕಾಕ ನ 23: ರೈತರು ಹಾಗೂ ಸಾಮಾನ್ಯ ವರ್ಗದವರ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರಿ ಬ್ಯಾಂಕ್‍ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಹೇಳಿದರು.

ಬುಧವಾರದಂದು ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಲ್ಲೋಳಿ ಶಾಖೆ ವತಿಯಿಂದ ಹಮ್ಮಿಕೊಂಡ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಹಕಾರ ತತ್ವದಡಿಯಲ್ಲಿ ರೈತರ ಹಣಕಾಸಿನ ತೊಂದರೆಯನ್ನು ನೀಗಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಶ್ರಮಿಸುತ್ತಿದ್ದು, ಸಂಘಗಳೊಂದಿಗೆ ತಮ್ಮ ಆರ್ಥಿಕ ವ್ಯವಹಾರಗಳನ್ನು ನಡೆಸಿ, ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಸ್ಥೆಗಳನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಕಲ್ಲೋಳಿ ಶಾಖೆಯಿಂದ ಸುಮಾರು 1600 ಕ್ಕೂ ಹೆಚ್ಚು ರೂಫೆ ಕಾರ್ಡಗಳನ್ನು ರೈತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ(ಕಲ್ಲೋಳಿ) ರಾವಸಾಹೇಬ ಬೆಳಕೂಡ, ಬಿಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ಎಮ್. ಎಮ್. ಕುರಬೇಟ, ಬ್ಯಾಂಕ್ ನಿರೀಕ್ಷಕರುಗಳಾದ ಎಮ್. ಎಸ್. ನಂದಗಾಂವಮಠ, ಎಸ್. ಜಿ. ಕೊಳವಿ, ಶಾಖಾ ವ್ಯವಸ್ಥಾಪಕ ಎಸ್. ಎಮ್. ಮಾಳ್ಯಾಗೋಳ, ಬಸು ಬಾಗೇವಾಡಿ ಸೇರಿದಂತೆ ಸಿಬ್ಬಂದಿಯವರು ಇದ್ದರು.

Related posts: