ಗೋಕಾಕ:ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ಬಂಧಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ
ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ಬಂಧಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ
ಗೋಕಾಕ ನ 24: ಬೆಳಗಾವಿ , ನಿಪ್ಪಾಣಿ ಸೇರಿದಂತೆ ಕರ್ನಾಟಕದ ಭೂಭಾಗ ಮಹಾರಾಷ್ಟ್ರ ಕ್ಕೆ ಸೇರಿದ್ದು ಎಂದು ಹೇಳಿಕೆ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆನನ್ನು ಸರಕಾರ ಬಂಧಿಸಬೇಕೆಂದು ಕರ್ನಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸದ್ದಾರೆ
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥನಾಗಿರುವ ಉದ್ದವ್ ಮಠಾಗರ ಒಲೈಕೆಗಾಗಿ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿರುವುದು ತರವಲ್ಲ
ಕರ್ನಾಟಕದ ಬಗ್ಗೆ ಇಂತಹ ನಾಡದ್ರೋಹಿಗಳು ಎಷ್ಟೇ ಬೋಬ್ಬೆ ಹೊಡೆದರು ಬೆಳಗಾವಿಯ ಒಂದಿಂಚು ಜಾಗ ತಗೆದುಕೋಳ್ಳಲು ಸಾಧ್ಯವಿಲ್ಲ . ಪದೇ ಪದೇ ಕನ್ನಡ , ಕರ್ನಾಟಕವನ್ನು ಅವಮಾನಿಸುತ್ತಿರುವ ನಾಡದ್ರೋಹಿ ಮರಾಠಿಗರು ತಮ್ಮ ನಡುವಳಿಕೆಗಳನ್ನು ತಿದ್ದುಕೊಂಡು ಬೆಳಗಾವಿಯಲ್ಲಿ ಜೀವನ ನಡೆಸಬೇಕು ಇಲ್ಲದಿದ್ದರೆ ಕನ್ನಡಿಗರು ಕಾನೂನು ಮೀರಿ ಹಿಂತಹವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದ ಖಾನಪ್ಪನವರ ಸರಕಾರ , ಜಿಲ್ಲಾಡಳಿತ ಎಚ್ಚರಗೊಂಡು ಬೆಳಗಾವಿಯ ಕೂಗಳತೆ ದೂರದಲ್ಲಿ ರುವ ಸಿಂಗೋಳಿಯಲ್ಲಿ ಕರ್ನಾಟಕವನ್ನು ಅವಮಾನಿಸಿರುವ ಉದ್ದವ್ ಠಾಕ್ರೆ ನನ್ನು ಕೂಡಲೇ ಬಂಧಿಸಿ ಪ್ರಕರಣ ದಾಖಲಿಸಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ