RNI NO. KARKAN/2006/27779|Friday, November 22, 2024
You are here: Home » breaking news » ಚಿಕ್ಕೋಡಿ:ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಚಿಕ್ಕೋಡಿ:ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ 

ಗಂಡನ ಜೊತೆ ಜಗಳ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಚಿಕ್ಕೋಡಿ ನ 27: ಮಹಿಳೆಯೋರ್ವಳು ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಇಂದಿರಾ ನಗರದಲ್ಲಿ ತಡರಾತ್ರಿ ನಡೆದಿದೆ

ಮೃತಳನ್ನು ಸ್ಮೀತಾ ಗಣಾಚಾರಿ (32), ಎಂದು ಗುರತಿಸಲಾಗಿದೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಗಂಡ- ಹೆಂಡತಿ ನಡುವೆ ಜಗಳವಾಗಿತ್ತು. ಇದರಿಂದ ನೊಂದಿದ್ದ ಸ್ಮೀತಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗ್ತಿದೆ. 

ಮನೆಯಲ್ಲಿನ ಜಗಳ ಕುರಿತು ಸ್ಮೀತಾ ಹಾರೋಗೇರಿಯಲ್ಲಿರುವ ತನ್ನ ತಂದೆಗೆ ಫೋನ್ ಮಾಡಿ ಗಂಡನ ಜೊತೆ ಜಗಳವಾಗಿರುವ ಬಗ್ಗೆ ತಿಳಿಸಿದ್ದಳು. ತವರು ಮನೆಯವರು ಬಂದು ಬುದ್ಧಿ ಹೇಳುವಷ್ಟರಲ್ಲಿ ಸ್ಮೀತಾ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಆದರೆ ಗಂಡನ ಮನೆಯವರ ಕಿರಕುಳದಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಮೀತಾಳ ತಂದೆ ಮಹಾದೇವ ಆರೋಪಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: