ಗೋಕಾಕ:ಕನ್ನಡ ರಕ್ಷಣೆಗಾಗಿ ಇಂದು ಯುವ ಜನಾಂಗ ಟೊಂಕಕಟ್ಟಿ ನಿಲ್ಲಬೇಕಾಗಿದೆ : ನ್ಯಾಯವಾದಿ ಕೆಂಪಣ್ಣ ಚೌಕಾಶಿ
ಕನ್ನಡ ರಕ್ಷಣೆಗಾಗಿ ಇಂದು ಯುವ ಜನಾಂಗ ಟೊಂಕಕಟ್ಟಿ ನಿಲ್ಲಬೇಕಾಗಿದೆ : ನ್ಯಾಯವಾದಿ ಕೆಂಪಣ್ಣ ಚೌಕಾಶಿ
ಗೋಕಾಕ ನ 28: ಕನ್ನಡ ನಾಡು ನುಡಿ, ಜಲ, ಗಡಿ ರಕ್ಷಣೆಗಾಗಿ ಇಂದು ಯುವ ಜನಾಂಗ ಟೊಂಕಕಟ್ಟಿ ನಿಲ್ಲಬೇಕಾಗಿದೆ ಎಂದು ಕರ್ನಾಟಕ ಯುವ ಸೇನೆಯ ರಾಜ್ಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಕೆಂಪಣ್ಣ ಚೌಕಾಶಿ ಹೇಳಿದರು
ಸೋಮವಾರದಂದು ತಾಲೂಕಿನ ಬಿಲಕುಂದಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆಯ ಗ್ರಾಮ ಘಟಕದ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಹಾಗೂ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
2ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಬಾಷೆಯನ್ನು ಪರಭಾಷೆಗಳ ಆಕ್ರಮಣದಿಂದ ನಶಿಸಿ ಹೋಗುತ್ತಿದ್ದು. ಭಾಷಾಭಿಮಾನವೆಂಬುದು ಕೇವಲ ತೋರಿಕೆಯಾಗಿ ಉಳಿಯದೇ ಅದೊಂದು ಸಹಜ ಗುಣವಾಗಿ ನಮ್ಮಲ್ಲಿ ಮೂಡಬೇಕು. ನಮ್ಮ ನಾಡು ನುಡಿ ಸಂಸ್ಕøತಿ ಹಾಗೂ ನಮ್ಮ ಬಾಷೆಯ ಮೇಲೆ ಇರುವ ಪ್ರೀತಿ ಉತ್ಸಾಹ ನವ್ಹಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ಎಂದರಲ್ಲದೇ ಕನ್ನಡ ಭಾಷೆಯನ್ನು ಪ್ರೀತಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಯುವ ಸೇನೆ ಜಿಲ್ಲಾ ಉಪಾಧ್ಯಕ್ಷ ಮಾರುತಿ ಶಿಂಗಾರಿ, ತಾಲೂಕಾಧ್ಯಕ್ಷ ದಸ್ತಗೀರ ಜಮಾದಾರ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಗ್ರಾಮದ ಮುಖಂಡರಾದ ಸಂಗಪ್ಪ ಕಳ್ಳಿಗುದ್ದಿ, ಶಿವಾಜಿ ಬಳಿಗಾರ, ಮಹಾದೇವ ಹೊಸತೋಟ, ಬಸವರಾಜ ಕಪರಟ್ಟಿ, ಕೃಷ್ಣಪ್ಪ ಕಪರಟ್ಟಿ, ಅಖಿಲೇಶ ಕಪ್ಪರಟ್ಟಿ, ಕುಮಾರ ಮೇದಾರ, ಪ್ರಶಾಂತ ದಡ್ಡಿಮನಿ, ನಿತೀನ ದೇಶಪಾಂಡೆ, ಸಂಜು ಹತ್ತಿಕಟಗಿ, ವೆಂಕಣ್ಣ ಕಪರಟ್ಟಿ, ನಾಗಪ್ಪ ಹತ್ತಿಕಟಗಿ ಸೇರಿದಂತೆ ಅನೇಕರು ಇದ್ದರು.